ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನಲ್ಲಿ ಶಾಕಿಂಗ್ ಬೆಳವಣಿಗೆಯೊಂದು ಬೆಳಕಿಗೆ ಬಂದಿದ್ದು, ಒಂದೇ ಗ್ರಾಮದ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದಾರೆ. ಶಿರಾದ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದು, ಎಲ್ಲೆಡೆ ಆತಂಕ ಮನೆಮಾಡಿದೆ.
ಮಂಜುಳಾ, ಮಧು, ಮಹಾಲಕ್ಷ್ಮಿ ಹಾಗೂ ಭಾನು ಆಟವಾಡಲು ಹೋದವರು ಇನ್ನೂ ಮನೆಗೆ ಬಂದಿಲ್ಲ. ಎಷ್ಟು ಸಮಯವಾದರು ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಗಾಬರಿಯಾಗಿದ್ದು, ಊರಿಡೀ ಹುಡುಕಾಡಿದ್ದಾರೆ.
ಆದರೆ ಮಕ್ಕಳ ಸುಳಿವು ಸಿಗದೇ ಪೊಲೀಸರ ಮೊರೆ ಹೋಗಿದ್ದಾರೆ. ನಾಲ್ಕು ಮಕ್ಕಳು 15 ವರ್ಷದವರಾಗಿದ್ದು, ಇಲ್ಲಿ ಅನುಮಾನ ಎದ್ದು ಕಾಡುತ್ತಿದೆ. ಒಂದೇ ವಯಸ್ಸಿನ ನಾಲ್ಕು ಮಕ್ಕಳು ನಾಪತ್ತೆಯಾಗಿರುವುದು ಹೇಗೆ? ಇದಕ್ಕೆ ಏನು ಕಾರಣ? ಕಿಡ್ನಾಪ್ ಆಗಿರಬಹುದಾ ಹೀಗೆ ಸಾಕಷ್ಟು ಅನುಮಾನ ಎದುರಾಗಿದೆ.
ಈ ಬಗ್ಗೆ ಶಿರಾ ಶಾಸಕ ಟಿ.ಬಿ. ಜಯಚಂದ್ರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಮಕ್ಕಳು ಕಂಡಲ್ಲಿ ಸಹಕರಿಸಿ ಪೊಲೀಸರಿಗೆ ಒಪ್ಪಿಸಿ ಎಂದು ಮನವಿ ಮಾಡಿದ್ದಾರೆ.