ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಸೋಮವಾರ ರಾತ್ರಿ ಫಿಲಡೆಲ್ಫಿಯಾದ ಕಿಂಗ್ಸೆಸ್ಸಿಂಗ್ ವಿಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಫಿಲಡೆಲ್ಫಿಯಾದ 56 ನೇ ಸ್ಟ್ರೀಟ್ ಮತ್ತು ಚೆಸ್ಟರ್ ಅವೆನ್ಯೂದಲ್ಲಿ ಶೂಟಿಂಗ್ ನಡೆದಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಪೆನ್ ಪ್ರೆಸ್ಬಿಟೇರಿಯನ್ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಫ್ರೇಜಿಯರ್ ಸ್ಟ್ರೀಟ್ನ 1800 ಬ್ಲಾಕ್ನಲ್ಲಿ ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ನಂತರ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಶಂಕಿತ ವ್ಯಕ್ತಿ ಬುಲೆಟ್ ಪ್ರೂಫ್ ವೆಸ್ಟ್ ಧರಿಸಿದ್ದು, ರೈಫಲ್ ಮತ್ತು ಗನ್ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದ ಕಿಂಗ್ಸೆಸಿಂಗ್ ಮತ್ತು ಚೆಸ್ಟರ್ ಮಾರ್ಗಗಳ ನಡುವೆ 56ನೇ ಬೀದಿಯನ್ನು ಕ್ಲೋಸ್ ಮಾಡಲಾಗಿದೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.