SHOCKING NEWS| ಅಧಿಕಾರಿಗಳ ನಿರ್ಲಕ್ಷ್ಯ, ಆನೆಗಳ ಪ್ರಾಣಕ್ಕೆ ಸಂಚಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಅಕಾಲಿಕ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನುಷ್ಯರು, ಪ್ರಾಣಿಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ಪಾರ್ವತಿಪುರಂ ಜಿಲ್ಲೆಯ ಭಾಮಿನಿ ಮಂಡಲದ ಕತ್ರಗಡ್ಡದಲ್ಲಿ ದಾರುಣ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶದಿಂದ 4 ಆನೆಗಳು ಸಾವನ್ನಪ್ಪಿವೆ.

ಟ್ರಾನ್ಸ್‌ಫಾರ್ಮರ್‌ ಧರೆಗುರುಳಿದ್ದರಿಂದ ಈ ಅವಘಡ ಸಂಭವಿಸಿದೆ. ಒಡಿಶಾದಿಂದ 6 ಆನೆಗಳು ಬಂದಿದ್ದು, ಈ ಪೈಕಿ 4 ಆನೆಗಳು ಅಪಘಾತದಲ್ಲಿ ಸಾವನ್ನಪ್ಪಿವೆ ಎನ್ನಲಾಗಿದೆ. ಉಳಿದ ಆನೆಗಳು ತಿವ್ವಕೊಂಡ ಕಡೆಗೆ ಹೋಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಟ್ರಾನ್ಸ್‌ಫಾರ್ಮರ್‌ ತೆರವುಗೊಳಿಸದಿದ್ದರೆ ಮತ್ತಷ್ಟು ಪ್ರಾಣಗಳಿಗೆ ಹಾನಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸರು, ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here