ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ATS) ನಾಲ್ವರು ಐಸಿಸ್ ಉಗ್ರರನ್ನು (ISIS Terrorists) ಬಂಧಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಸ್ ಸಿಬ್ಬಂದಿಯು ಶ್ರೀಲಂಕಾದ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ತಮ್ಮ ಹ್ಯಾಂಡ್ಲರ್‌ಗಾಗಿ ಕಾಯುತ್ತಿರುವಾಗಲೇ ಬಲೆಗೆ ಹಾಕಿದ್ದಾರೆ.
ನಾಲ್ವರನ್ನೂ ಬಂಧಿಸುತ್ತಲೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಎಟಿಎಸ್ ಸಿಬ್ಬಂದಿಯು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ಏನು ಮಾಡುತ್ತಿದ್ದರು? ಅವರು ರೂಪಿಸಿದ ಸಂಚೇನು? ಎಲ್ಲಿಗೆ ಹೋಗುವವರಿದ್ದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.