ಹೊಸದಿಗಂತ ಡಿಜಿಟಲ್ ಡೆಸ್ಕ್;
ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಇಬ್ಬರು ಮಕ್ಕಳ ಸಮೇತ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ತಂದೆ ವಿಠ್ಠಲರಾವ್(85), ಪುತ್ರ ನಾರಾಯಣ ಶಿಂಧೆ(42) ಮಕ್ಕಳಾದ ಶಿವರಾಜ(12), ಶ್ರೀನಿಧಿ(10) ಮೃತ ದುರ್ವೈವಿಗಳು.
ಚಿಕ್ಕಮಲ್ಲಿಗವಾಡ ಗ್ರಾಮದ ಹೊರಗೆ ಇರುವ ಹಳೇ ಬಾವಿಗೆ ತೆರಳಿದ್ದು, ಚಪ್ಪಲಿಗಳನ್ನ ದಂಡದ ಮೇಲೆ ಬಿಟ್ಟಿದ್ದಾರೆ. ಬಳಿಕ ದಂಪತಿ ಮಕ್ಕಳ ಸಮೇತ ಬಾವಿಗೆ ಜಿಗಿದಿದ್ದಾರೆ.
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಧಾರವಾಡ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

