ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದೊಡ್ಡ ಅವಘಡ ಸಂಭವಿಸಿದೆ. ಜಿಲ್ಲೆಯ ಮರ್ದಾ ಪೊಲೀಸ್ ಠಾಣೆ ವ್ಯಾಪ್ತಿಯ ನರವರ್ ಗ್ರಾಮದಲ್ಲಿ ಕಾಶಿದಾಸ ಬಾಬಾ ಪೂಜೆಗೆ ಬೆಳಗ್ಗೆ ಸಿದ್ಧತೆಗಳು ನಡೆಯುತ್ತಿದ್ದವು. ಈ ಸಮಯದಲ್ಲಿ, ಹೈಟೆನ್ಷನ್ ತಂತಿ ಸ್ಪರ್ಶಿಸಿ 4 ಯುವಕರು ಮೃತಪಟ್ಟಿದ್ದಾರೆ. ಮೂವರು ಸ್ಥಿತಿ ಗಂಭೀರವಾಗಿದೆ.
ಪೂಜಾ ಸ್ಥಳದಲ್ಲಿ ಹಸಿಯಾಗಿದ್ದ ಬಿದಿರು ಕಂಬವನ್ನು ನೆಡುವಾಗ, ಹೈಟೆನ್ಷನ್ ವಿದ್ಯುತ್ ಲೈನ್‌ಗೆ ತಗುಲಿದ್ದರಿಂದ ಈ ದುರಂತ ಸಂಭವಿಸಿದೆ. ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಬಿದಿರು ವಿದ್ಯುತ್ ಸಂಪರ್ಕಕ್ಕೆ ಬಂದ ತಕ್ಷಣ, ಅದು ಬೆಂಕಿಗೆ ಆಹುತಿಯಾಗಿದೆ. ದಿಢೀರ್ ಎಂದು ಸಂಭವಿಸಿದ ಘಟನೆಯಿಂದ ಅಲ್ಲಿ ಸೇರಿದ್ದ ಜನರು ಗಲಿಬಿಲಿಗೆ ಒಳಗಾದರು. ಛೋಟೇಲಾಲ್ ಯಾದವ್ (35), ರವೀಂದ್ರ ಯಾದವ್ ಅಲಿಯಾಸ್ ಕಲ್ಲು (29), ಗೋರಖ್ ಯಾದವ್ (23) ಮತ್ತು ಅಮನ್ ಯಾದವ್ (19) ಮೃತಪಟ್ಟವರು ಎಂದು ತಿಳಿದು ಬಂದಿದೆ. ರವೀಂದ್ರ ಯಾದವ್ ಕಾನ್‌ಸ್ಟೇಬಲ್ ಆಗಿದ್ದರು. ಇನ್ನು ಗೋರಖ್ ರವೀಂದ್ರ ಯಾದವ್ ಅವರ ಸಹೋದರ ಎಂದು ತಿಳಿದುಬಂದಿದೆ.