ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿ ಬೆಟ್ಟಕ್ಕೆ ಪ್ರವಾಸ ಬಂದಿದ್ದ ನಾಲ್ವರು ಯುವಕರು ದುರಂತ ಸಾವು ಕಂಡಿದ್ದಾರೆ. ದೇವನಹಳ್ಳಿ ಸಮೀಪದ ರಾಮನಾಥಪುರ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಇವರೆಲ್ಲರೂ ತೆರಳಿದ್ದು, ಬೆಂಗಳೂರಿಗೆ ವಾಪಾಸ್ ಆಗುವಾಗ ಕೆರೆ ನೋಡಿದ್ದಾರೆ.
ನೀರಿನಲ್ಲಿ ಈಜಲು ಬಟ್ಟೆ ತೆಗೆದಿಟ್ಟು ತೆರಳಿದ್ದ ಫಿರೋಜ್ ಖಾನ್, ಶಹೀದ್ ಇಸ್ಮಾಯಿಲ್, ಶೇಖ್ ತಾಹಿರ್ ಹಾಗೂ ತೋಹಿದ್ ಮುನೀರ್ ಮೃತಪಟ್ಟಿದ್ದಾರೆ. ಕೆರೆ ದಡದಲ್ಲಿ ಬಟ್ಟೆಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.