ಸಾವಿರ ವರ್ಷಗಳ ನಂತರ ಒಂದೇ ರೇಖೆಯಲ್ಲಿ ಬರಲಿವೆ ನಾಲ್ಕು ಗ್ರಹಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾವಿರ ವರ್ಷಗಳಿಗೊಮ್ಮೆ ಸೌರಮಂಡಲದಲ್ಲಿ ನಡೆಯುವ ಅಪರೂಪದ ಮತ್ತು ವಿಶಿಷ್ಟವಾದ ಘಟನೆ ಏಪ್ರಿಲ್‌ ಕೊನೆಯ ವಾರದಲ್ಲಿ ನಡೆಯಲಿದೆ. ನಾಲ್ಕು ಪ್ರಮುಖಗ್ರಹಗಳಾದ ಮಂಗಳ,ಗುರು, ಶುಕ್ರ ಮತ್ತು ಶನಿ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬರಲಿವೆ. ಸೂರ್ಯೋದಯಕ್ಕೆ ಮುಂಚೆ ಒಂದು ಗಂಟೆಗಳ ಕಾಲ ನಡೆಯಲಿರುವ ಈ ಅಪರೂಪದ ಘಟನೆಗೆ ಸೌರಮಂಡಲ ಸಾಕ್ಷಿಯಾಗಲಿದೆ.

ಈ ಕುರಿತು ಮಾತನಾಡಿರುವ ಭುವನೇಶ್ವರದ ಪಠಾಣಿ ಸಾಮಂತ ತಾರಾಲಯದ ಉಪನಿರ್ದೇಶಕ ಸುಭೇಂದು ಪಟ್ನಾಯಕ್‌ “ಏಪ್ರಿಲ್‌ ಕೊನೆಯವಾರದಲ್ಲಿ ಅಪರೂಪದ ಘಟನೆ ನಡೆಯಲಿದ್ದು ನಾಲ್ಕು ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬರಲಿವೆ. ಒಂದು ಗಂಟೆಗಳ ಕಾಲ ನಡೆಯುವ ಈ ಘಟನೆಯನ್ನು ʼಗ್ರಹಗಳ ಮೆರವಣಿಗೆʼ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಗ್ರಹಳು ಸಾಲಾಗಿ ಒಂದೇ ರೇಖೆಯಲ್ಲಿ ಜೋಡಣೆಯಾದಾಗ ʼಗ್ರಹಗಳ ಮೆರವಣಿಗೆʼ ಪ್ರಕ್ರಿಯೆ ನಡೆಯುತ್ತದೆ. ಈಹಿಂದೆ ಹಲವು ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿವೆ. ಆದರೆ ಈ ನಾಲ್ಕು ಗ್ರಹಗಳು 1000 ವರ್ಷಕ್ಕೊಮ್ಮೆ ಸಾಲಾಗಿ ಜೋಡಣೆಯಾಗುತ್ತದೆ. ಈ ಹಿಂದೆ ಇಂಥಹ ಘಟನೆ ಕ್ರಿಸ್ತಶಕ 947 ರಲ್ಲಿ ನಡೆದಿತ್ತು.” ಎಂದು ಹೇಳಿದ್ದಾರೆ.

ಏಪ್ರಿಲ್ 26 ಮತ್ತು 27 ರಂದು ಸೂರ್ಯೋದಯಕ್ಕೆ ಒಂದು ಗಂಟೆ ಮೊದಲು ಪೂರ್ವ ಭಾಗದಲ್ಲಿ ಗ್ರಹಗಳೊಂದಿಗೆ ಚಂದ್ರನೂ ಗೊಚರಿಸುತ್ತಾನೆ. ವಾತಾವರಣವು ತಿಳಿಯಾಗಿದ್ದರೆ ದೂರದರ್ಶಕದ ಸಹಾಯವಿಲ್ಲದೇ ಇದನ್ನು ನೋಡಬಹುದಾಗಿದೆ. ಏಪ್ರಿಲ್ 30 ರಂದು ಶುಕ್ರ ಮತ್ತು ಗುರು ಗ್ರಹಳು ಬಹಳ ಪ್ರಕಾಶ ಮಾನವಾಗಿ ಗೋಚರಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!