ಉಳ್ಳಾಲದಲ್ಲಿ ಸಮುದ್ರಪಾಲಾಗುತ್ತಿದ್ದ ನಾಲ್ವರು ಮಹಿಳೆಯರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಉಳ್ಳಾಲದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟು ಉಳ್ಳಾಲದ ಸಮುದ್ರ ತೀರ ವಿಹಾರಕ್ಕೆ ತೆರಳಿದ್ದ ಐವರು ಮಹಿಳೆಯರಲ್ಲಿ ನಾಲ್ವರು ಸಮುದ್ರಪಾಲಾಗಿದ್ದು ಸ್ಥಳೀಯ ಮೊಗವೀರ ಸಮುದಾಯದ ಈಜುಗಾರರು ರಕ್ಷಿಸಿದ್ದು,ಗಂಭೀರಗೊಂಡ ಓರ್ವ ಮಹಿಳೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು ನಾಯಂಡನ ಹಳ್ಳಿಯ ಸವಿತಾ(38)ಸೌಮ್ಯಾ(39) ,ಬಿಂದು(20),ಪದ್ಮಿನಿ(38)ಮತ್ತು ಮಂಜುಳ(35) ಎಂಬ ಐವರು ಮಹಿಳೆಯರು ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ಮಧ್ಯಾಹ್ನ ವೇಳೆ ಉಳ್ಳಾಲ ಬೀಚ್ಗೆ ತೆರಳಿದ್ದರು.

ಐವರು ಯುವತಿಯರು ಸಮುದ್ರ ತೀರದಲ್ಲಿ ಕುಳಿತ್ತಿದ್ದ ವೇಳೆ ಬೃಹತ್ ಗಾತ್ರದ ಅಲೆಯೊಂದು ತೀರಕ್ಕೆ ಅಪ್ಪಳಿಸಿದ್ದು ಸವಿತಾ ,ಸೌಮ್ಯ,ಬಿಂದು ,ಪದ್ಮಿನಿ ನೀರು ಪಾಲಾಗಿದ್ದಾರೆ.

ಕೂಡಲೇ ಸಮಯ ಪ್ರಜ್ನೆ ಮೆರೆದ ಸ್ಥಳೀಯ ಈಜುಗಾರರು ನಾಲ್ವರು ಯುವತಿಯರನ್ನ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪದ್ಮಿನಿ ಸ್ಥಿತಿ ಸ್ವಲ್ಪ ಗಂಭೀರಗೊಂಡಿದ್ದು ಉಳಿದವರು ಚೇತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!