ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಒಕ್ಕಣೆ ಯಂತ್ರದ ಮೇಲೆ ಕುಳಿತಿದ್ದ ನಾಲ್ವರು ಕಾರ್ಮಿಕರು ಸಿಡಿಲು ಬಡಿತದಿಂದ ಮೃತಪಟ್ಟಿದ್ದಾರೆ.
ಸುನೀಲ್ ಸಾಹೇಬ್‌ರಾವ್ ವೈಕೋಲೆ, ಮಾಧವ್ ಪಿರಾಜಿ ದುಬುಕ್ವಾಡ್, ಪೋಜಿರಾಮ್ ಶ್ಯಾಮರಾವ್ ಗಾಯಕವಾಡ್ ಮತ್ತು ರೂಪಾಲಿ ಪೋಚಿರಾಮ್ ಗಾಯಕವಾಡ್ ಮೃತರು.ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೂನ್‌ನಲ್ಲಿಯೂ ನಾಂದೇಡ್ ಜಿಲ್ಲೆಯಲ್ಲಿ ಮಳೆಯಿಂದ ಸಿಡಿಲು ಬಡಿದು 14 ಮಂದಿ ಮೃತಪಟ್ಟಿದ್ದರು.