ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ನಡಿಗೆ ದಾರಿಯಲ್ಲಿ ನಾಲ್ಕನೇ ಚಿರತೆ ಸಿಕ್ಕಿಬೀಳುವುದರೊಂದಿಗೆ, ಟಿಟಿಡಿ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಕೈಗೊಂಡಿದ್ದ ‘ಆಪರೇಷನ್ ಚೀತಾ’ ಅಂತ್ಯಗೊಂಡಿದೆ.
ಸೋಮವಾರ ಬೆಳಗಿನ ಜಾವ ವೇಳೆ ತಿರುಪತಿ ಪಾದಚಾರಿ ಮಾರ್ಗದ 7ನೇ ಮೈಲಿನಲ್ಲಿ ಹಾಕಲಾಗಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ. ಇದರಿಂದ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈವರೆಗೆ ನಾಲ್ಕು ಚಿರತೆಗಳನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ತಿರುಮಲ ನಡಿಗೆದಾರಿಯ ಮೇಲೆ ಚಿರತೆ ದಾಳಿ ಮಾಡಿ ಮಗು ಲಕ್ಷಿತಾಳನ್ನು ಕೊಂದಿರುವ ಹಿನ್ನೆಲೆಯಲ್ಲಿ ಟಿಟಿಡಿ ದೇವಸ್ಥಾನ ಅಲರ್ಟ್ ಆಗಿ, ಭಕ್ತರ ಸುರಕ್ಷತೆಗೆ ಒತ್ತು ನೀಡಲಾಗಿತ್ತು. 7ನೇ ಮೈಲಿಯಿಂದ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಹೈ ಅಲರ್ಟ್ ಝೋನ್ ಎಂದು ಘೋಷಿಸಿ, ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಮೇಲ್ವಿಚಾರಣೆ ಕಡ್ಡಾಯವಾಗಿತ್ತು. ಈ ಕ್ರಮದಲ್ಲಿ ಈ ತಿಂಗಳ 14 ಮತ್ತು 17ರಂದು ಎರಡು ಚಿರತೆಗಳು ಬೋನಿನಲ್ಲಿ ಸಿಕ್ಕಿಬಿದ್ದಿದ್ದವು. ಇದೀಗ ನಾಲ್ಕನೇ ಚಿರತೆ ಬೋನಿಗೆ ಬಿದ್ದಿದೆ.