ಹೊತ್ತಿ ಉರಿದ ಫ್ರಾನ್ಸ್ | ಮೇಯರ್ ನಿವಾಸಕ್ಕೆ ಬೆಂಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರಾನ್ಸ್‌ನಾನದ್ಯಂತ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿದ್ದು, ಐದು ದಿನಗಳು ಕಳೆದರೂ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ.

ಉದ್ರಿಕ್ತ ಪ್ರತಿಭಟನಾಕಾರರು ಪ್ಯಾರಿಸ್‌ನ ಉಪನಗರದ ಮೇಯರ್ ವಿನ್‌ಸೆಂಟ್ ಜೀನ್‌ಬ್ರುನ್ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ. ನಿವಾಸದ ಗೇಟ್ ಒಡೆದು ಕಾರು ನುಗ್ಗಿಸಿ ಬೆಂಕಿ ಇಟ್ಟಿದ್ದಾರೆ. ಈ ವೇಳೆ ಮೇಯರ್ ಪತ್ನಿ ಹಾಗೂ ಮಕ್ಕಳು ಮನೆಯಲ್ಲಿ ಮಲಗಿದ್ದು, ಹಿಂಬಾಗಿಲಿನಿಂದ ಹೊರಬಂದಿದ್ದಾರೆ.

ಮನೆಯಲ್ಲಿದ್ದ ಬಾಕಿ ಸದಸ್ಯರು ಗಾಯಗೊಂಡಿದ್ದಾರೆ. ಈ ವೇಳೆ ಮೇಯರ್ ಟೌನ್‌ಹಾಲ್‌ನಲ್ಲಿ ಹಿಂಸಾಚಾರದ ಮೇಲ್ವಿಚಾರಣೆ ನಡೆಸುತ್ತಿದ್ದರು. ಯುವಕನ ಹತ್ಯೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ.

17 ವರ್ಷದ ಚಾಲಕನನ್ನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ ಎನ್ನುವ ಕಾರಣದಿಂದಾಗಿ ಪೊಲೀಸರು ಶೂಟ್ ಮಾಡಿ ಕೊಂದಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ ಗಲಭೆ ಆರಂಭವಾಗಿದ್ದು, ಇಡೀ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!