ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಅಧಿಕಾರಿಯಿಂದ ಗುಂಡೇಟಿಗೆ ಬಾಲಕ ಬಲಿಯಾದಾಗಿನಿಂದ ಫ್ರಾನ್ಸ್ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾದ ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹೊಸದಾಗಿ ತಡರಾತ್ರಿ ಮತ್ತೆ ನೂರು ಜನರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ನಾಂಟೆರ್ರೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಂದ ಗುಂಡು ಹಾರಿಸಿದ ಅಲ್ಜೀರಿಯಾ ಮೂಲದ 17 ವರ್ಷದ ನಹೆಲ್ ಮೆರ್ಜೌಕ್ ಸಾವಿನ ನಂತರ ಫ್ರಾನ್ಸ್ ಪ್ರತಿಭಟನೆಯ ಅಲೆಯಿಂದ ತತ್ತರಿಸಿದೆ. ಮೃತ ಬಾಲಕನ ಅಜ್ಜು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಅಜ್ಜಿ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಹೇಳಿದ್ದಾರೆ. ಶಾಲೆಗಳು, ಬಸ್ಸುಗಳಿಗೆ ಹಾನಿ ಮಾಡದಂತೆ ಮನವಿ ಮಾಡಿದ್ದಾರೆ.
ನಿನ್ನೆ, ಪ್ಯಾರಿಸ್ ಉಪನಗರದ ಮೇಯರ್ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ “ಮಕ್ಕಳನ್ನು ರಕ್ಷಿಸಲು ಮತ್ತು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ನನ್ನ ಹೆಂಡತಿ ಮತ್ತು ನನ್ನ ಮಕ್ಕಳಲ್ಲಿ ಒಬ್ಬರು ಗಾಯಗೊಂಡಿದ್ದಾರೆ.”
“ಈ ರಾತ್ರಿಯ ಭಯಾನಕತೆಯನ್ನು ವಿವರಿಸಲು ಯಾವುದೇ ಪದಗಳಿಲ್ಲ” ಎಂದು ಜೇನ್ಬ್ರುನ್ ಹೇಳಿದರು. ಅವರ ರಕ್ಷಣೆಗೆ ನಿಂತ ಪೋಲಿಸ್ ಮತ್ತು ರಕ್ಷಣಾ ಸೇವೆಗಳಿಗೆ ಧನ್ಯವಾದ ಹೇಳಿದರು.