ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಿಯರಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಅಡಿ 6.71 ಕೋಟಿ ರೂ. ಹಣ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಕ್ರಿಪ್ಟೋ ಕರೆನ್ಸಿ ರೂಪದಲ್ಲಿ 71.3 ಲಕ್ಷ ಕರೆನ್ಸಿ ಜಪ್ತಿ ಮಾಡಿರುವ ಇಡಿ, 12 ಘಟಕಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಭಾರತೀಯರನ್ನೇ ವ್ಯವಸ್ಥಾಪಕರು, ಟೆಲಿಕಾಲರ್, ಸಿಬ್ಬಂದಿಯಾಗಿ ನೇಮಿಸಿ ಕೀಪ್ ಶೇರರ್ ಮೊಬೈಲ್ ಆ್ಯಪ್ ಮೂಲಕ ಚೀನಿಯರು ವಂಚಿಸುತ್ತಿದ್ದರು. ಚೀನಾ ಮೂಲದ 6 ಕಂಪನಿಗಳ 9 ಆರೋಪಿಗಳು ವಂಚನೆಯಲ್ಲಿ ಭಾಗಿಯಾಗಿದ್ದರು.ಬೆಂಗಳೂರಿನ ದಕ್ಷಿಣ CEN ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.