ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್‌ನಿಂದ ಐದು ಕೋಟಿ ರೂಪಾಯಿ ವಂಚನೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಕೋರ್ಟ್ 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ.
ಸೆ.29ರವರೆಗೂ ಕಸ್ಟಡಿಯಲ್ಲಿ ಇರಲಿದ್ದು, ಈ ಬಗ್ಗೆ ವಿಚಾರಣೆ ನಡೆಯಲಿದೆ. ಹೆಚ್ಚಿನ ವಿವರಣೆ, ಮಹಜರು ಪ್ರಕ್ರಿಯೆಗಾಗಿ ನಮ್ಮ ವಶಕ್ಕೆ ಆರೋಪಿಯನ್ನು ನೀಡಬೇಕು ಎಂದು ಸಿಸಿಬಿ ಪೊಲೀಸರು ಮನವಿ ಮಾಡಿದ್ದು, ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎನ್ನುವವರಿಂದ ಐದು ಕೋಟಿ ರೂಪಾಯಿ ಪಡೆದ ಆರೋಪವನ್ನು ಹಾಲಶ್ರೀ ಎದುರಿಸುತ್ತಿದ್ದಾರೆ.