ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ಉಚಿತ ಹಿನ್ನೆಲೆಯಲ್ಲಿ ಮಹಿಳಾ ಮಣಿಗಳ ದರ್ಬಾರ್ ಜೋರಾಗಿದೆ. ಇಂದು ಅವಾಮಾಸ್ಯೆ ಹಿನ್ನೆಲೆಯಲ್ಲಿ ಪ್ರಸಿದ್ದ ಪುಣ್ಯಕ್ಷೇತ್ರಗಳ ದರುಶನಕ್ಕೆ ಮಹಿಳೆಯರ ದಂಡೇ ನಿಂತಿದೆ. ಶನಿವಾರ-ಭಾನುವಾರವಾದ್ದರಿಂದ ರಾಜ್ಯದ ಹಲವು ಪ್ರಸಿದ್ಧ ದೇವಾಲಯಗಳತ್ತ ಮಹಿಳೆಯರು ಮುಖ ಮಾಡಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರು ಚಾಮುಂಡೇಶ್ವರಿ, ಮಲೆ ಮಹಾದೇಶ್ವರ ಬೆಟ್ಟ, ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಮುರುಡೇಶ್ವರ ಸೇರಿದಂತೆ ಹಲವು ದೇವಾಲಯಗಳು ಮಹಿಳಾ ಭಕ್ತರಿಂದ ತುಂಬಿ ತುಳುಕುತ್ತಿವೆ.
ಇನ್ನೂ ನಾನ್ ಎಸಿ ಬಸ್ಗಳಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಟಿಕೆಟ್ ಕೊಡಲು ನಿರ್ವಾಹರು ಪರದಾಡುವ ಸ್ಥಿತಿ ಬಂದಿದೆ. ಮತ್ತೊಂದೆಡೆ ಡ್ರೈವರ್ ಸೀಟಿನಿಂದಲೇ ಬಸ್ ಹತ್ತಲು ಮುಂದಾಗಿದ್ದು, ಚಾಲಕ-ನಿರ್ವಾಹಕರ ಪರದಾಟ ಹೇಳತೀರಾಗಿದೆ.