ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ರಾಜ್ಯ ಸರ್ಕಾರದ ಫ್ರೀ ಬಸ್ ಯೋಜನೆಯಿಂದ ಮೈಸೂರಿನಿಂದ ತುಮಕೂರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಕಿರುಚಾಡಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಅತಿಯಾದ ಜನಸಂದಣಿಯಲ್ಲಿ ಬಸ್‌ನೊಳಗೆ ಉಂಟಾದ ತೀವ್ರ ನೂಕಾಟ-ತಳ್ಳಾಟದಿಂದ ಮಹಿಳೆಯೊಬ್ಬರಿಗೆ ಉಸಿರಾಡಲು ತೀವ್ರ ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ, ಬಸ್ಸಿನಿಂದ ಕೆಳಗಿಳಿಸಿ ಎಂದು ಜೋರಾಗಿ ಮಹಿಳಾ ಪ್ರಯಾಣಿಕರೊಬ್ಬರು ಕೂಗಿಕೊಂಡಿದ್ದಾರೆ. ತಕ್ಷಣವೇ ಬಸ್ಸು ನಿಲ್ಲಿಸಿದ ನಿರ್ವಾಹಕರು ಮಹಿಳೆಯನ್ನು ಕೆಳಗಿಳಿಸಿದ್ದಾರೆ.
ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿದ್ದ ಮಹಿಳಾ ತಂಡ ಈ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಕಾಡಾನೆ ದಾಳಿ – ಮನೆ ಮೇಲೆ ತೆಂಗಿನ ಮರ ಬಿದ್ದು