ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇಂದು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇಂದು ಚಾಲನೆ ಸಿಕ್ಕಿದ್ದು, ಇತ್ತ ಯುವಕನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾನೆ.
ಹೌದು. ಮಹಿಳೆಯರಿಗೆ ಉಚಿತ ಬಸ್ (Free Bus Ticket) ಓಕೆ. ನಮಗೆ ಫ್ರೀ ಟಿಕೆಟ್ ಬೇಡ್ವೇ ಬೇಡ. ಆದರೆ ಸಿಎಂ ಸಾಹೇಬ್ರೆ ಎಣ್ಣೆ ರೇಟು ಹೆಚ್ಚು ಮಾಡಿದ್ದು ಸರಿಯಲ್ಲ. ಹೀಗಾಗಿ ದಯವಿಟ್ಟು ಎಣ್ಣೆ ರೇಟು ಇಳಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಅಬಕಾರಿ ಇಲಾಖೆ (Excise Department) ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದೆ. ಸ್ಲಾಬ್‍ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‍ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್ ಗಳ ವಿವಿಧ ಬ್ರ್ಯಾಂಡ್‍ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.