ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಡ್ರೈವಿಂಗ್ ಕ್ಲಾಸ್‌ಗಳಲ್ಲಿ 10 ದಿನ ಟ್ರೈನಿಂಗ್‌ಗೆ 10 ಸಾವಿರ ಪಡೆಯುತ್ತಿರುವ ಕಾರಣ ಜನ ಡ್ರೈವಿಂಗ್ ಕ್ಲಾಸ್‌ಗೆ ಹೋಗೋದಕ್ಕೆ ಹಿಂದೆ ಮುಂದೆ ನೋಡ್ತಿದ್ದಾರೆ.
ಡ್ರೈವಿಂಗ್ ಬಗ್ಗೆ ಆಸಕ್ತಿ ಇರುವವರಿಗೆ ಡ್ರೈವಿಂಗ್ ಕಲಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಬಿಎಂಟಿಸಿಯಿಂದ ಯುವಕ-ಯುವತಿಯರಿಗೆ ಉಚಿತವಾಗಿ ಬಸ್ ಹಾಗೂ ಕಾರ್ ಡ್ರೈವಿಂಗ್ ಕ್ಲಾಸ್ ನಡೆಸಲಾಗುತ್ತದೆ.
ಬೆಂಗಳೂರಿನ ವಡ್ಡರಹಳ್ಳಿಯ 22 ಎಕರೆ ಪ್ರದೇಶದಲ್ಲಿ ಕ್ಲಾಸ್ ನಡೆಯಲಿದ್ದು, ದೂರದೂರಿನಿಂದ ಬರುವವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮೂವತ್ತು ದಿನದ ತರಬೇತಿ ನಂತರ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಡಲಾಗುತ್ತದೆ.
ಬಡ ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ಸಬಲರಾಗಲು ಡ್ರೈವಿಂಗ್ ಕ್ಲಾಸ್ ಆಯೋಜನೆ ಮಾಡಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರು ಆಗಮಿಸಬಹುದಾಗಿದೆ.