ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಅಕ್ಕನ ಮಗನನ್ನು ಮಾವನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮೋಘ ಕೀರ್ತಿ ಎಂಬ ಬಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಾಲಕನ ಮಾವನನ್ನು ಬಂಧಿಸಿದ್ದಾರೆ.
ಬಾಲಕ ಅಮೋಘ ಕೀರ್ತಿ ಕಳೆದ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್ನಲ್ಲಿ ಫ್ರೀಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕನ ಕತ್ತು ಸೀಳಿ ಕೊಂದಿದ್ದಾರೆ.
ಸೋಮವಾರ ಬೆಳಗಿನ ಜಾವ 4.30ಕ್ಕೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ನಾಗಪ್ರಸಾದ್, ಎಲ್ಲಿಗೂ ಹೋಗಲು ಹಣವಿಲ್ಲದೆ ಮೆಜೆಸ್ಟಿಕ್ನಲ್ಲೇ ಮೂರು ದಿನಗಳ ಕಾಲ ಕಳೆದಿದ್ದ. ಬಳಿಕ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದಾನೆ, ಘಟನೆ ಸಂಬಂಧ ಎಫ್ಐಆರ್ ದಾಖಲಿಸಿದ ಪೊಲೀಸರು ನಾಗಪ್ರಸಾದ್ ನನ್ನು ಬಂಧಿಸಿದ್ದಾರೆ.