ಹೊಸದಿಗಂತ ವರದಿ, ಶಿವಮೊಗ್ಗ:
ತಮ್ಮ ಮೇಲಿನ 40 ಪರ್ಸೆಂಟ್ ಆರೋಪದಿಂದ ಮುಕ್ತ ಆಗಿರುವುದು ರಾಷ್ಟ್ರದ ಮತ್ತು ರಾಜ್ಯದಲ್ಲಿ ಇನ್ನಷ್ಟು ಸೇವೆಗೆ ಸ್ಫೂರ್ತಿ ನೀಡಿದಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾನು ನಂಬಿದ ಚೌಡೇಶ್ವರಿ ನನಗೆ ನ್ಯಾಯ ಕೊಡಿಸಿದ್ಸಾಳೆ. ಇದರಿಂದಾಗಿ ನನ್ನ ದೈವ ಭಕ್ತಿ ಇನ್ನಷ್ಟು ಹೆಚ್ಚಳ ಆಗಿದೆ.ಮತ್ತಷ್ಟು ದೇಶ ಸೇವೆ ಮಾಡುತ್ತೇನೆ ಎಂದರು.