September 30, 2026
Wednesday, September 30, 2026
spot_img

ಫ್ರೀಡಂ ಆಫ್ ಸ್ಪೀಚ್‌ಗೆ ಧಕ್ಕೆ? ರಾಜ್ಯ ಸರ್ಕಾರದ ಮಹತ್ವದ ಬಿಲ್‌ ತಡೆದ ಗೆಹ್ಲೋಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲ ಸಮರ ಈಗ ಮತ್ತೊಂದು ಘಟ್ಟಕ್ಕೆ ತಲುಪಿದೆ. ಬೆಳಗಾವಿ ಅಧಿವೇಶನದಲ್ಲಿ ಅಂಗೀಕಾರವಾಗಿದ್ದ ‘ದ್ವೇಷ ಭಾಷಣ ನಿಯಂತ್ರಣ ವಿಧೇಯಕ’ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕದೆ, ಅದನ್ನು ರಾಷ್ಟ್ರಪತಿಗಳ ಅಂಗಳಕ್ಕೆ ಕಳುಹಿಸಿಕೊಟ್ಟಿದ್ದಾರೆ.

ರಾಜ್ಯ ಸರ್ಕಾರ ಕಳುಹಿಸಿದ್ದ ವಿಧೇಯಕಕ್ಕೆ ಸಹಿ ಹಾಕದ ರಾಜ್ಯಪಾಲರು, ಹೆಚ್ಚಿನ ಪರಿಶೀಲನೆಗಾಗಿ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ವರ್ಗಾಯಿಸಿದ್ದಾರೆ.

ಮಸೂದೆಯನ್ನು ತಡೆಹಿಡಿಯಲು ರಾಜ್ಯಪಾಲರು ಬರೋಬ್ಬರಿ 29 ಕಾರಣಗಳನ್ನು ನೀಡಿದ್ದಾರೆ. ಮುಖ್ಯವಾಗಿ, ಈ ಬಿಲ್‌ನಲ್ಲಿ ‘ದ್ವೇಷ ಭಾಷಣ’ದ ವ್ಯಾಖ್ಯಾನ ಅಸ್ಪಷ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಸೂದೆಯು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಧ್ಯತೆ ಇದೆ ಎಂಬ ಗಂಭೀರ ಅಂಶವನ್ನು ರಾಜ್ಯಪಾಲರು ಎತ್ತಿ ತೋರಿಸಿದ್ದಾರೆ. ಈ ಬಿಲ್‌ಗೆ ಒಪ್ಪಿಗೆ ನೀಡಬಾರದೆಂದು ಈಗಾಗಲೇ 40ಕ್ಕೂ ಹೆಚ್ಚು ಸಂಘಟನೆಗಳಿಂದ ಮತ್ತು ವ್ಯಕ್ತಿಗಳಿಂದ ಮನವಿ ಬಂದಿರುವುದನ್ನು ರಾಜ್ಯಪಾಲರು ತಮ್ಮ ನಿರ್ಧಾರಕ್ಕೆ ಪೂರಕವಾಗಿ ಉಲ್ಲೇಖಿಸಿದ್ದಾರೆ.

Must Read