ಬ್ರೆಡ್‌ನಿಂದ ತಯಾರಿಸಬಹುದಾದ ಸುಲಭವಾದ ಮತ್ತು ರುಚಿಕರವಾದ ಸ್ನಾಕ್ಸ್ ಎಂದರೆ ಅದು ಫ್ರೆಂಚ್ ರವಾ ಟೋಸ್ಟ್. ಇದು ಫ್ರೆಂಚ್ ಟೋಸ್ಟ್‌ಗೆ ಭಾರತೀಯ ಅಡುಗೆ ಶೈಲಿಯಲ್ಲಿ ನೀಡಲಾದ ಹೊಸ ಸ್ವಾದ.
ಬೇಕಾಗುವ ಸಾಮಗ್ರಿಗಳು:
ರವಾ – 1 ಕಪ್
ಮೊಸರು – 1/2 ಕಪ್
ಹಾಲು – 1/4 ಕಪ್
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಟೊಮಾಟೊ – 1 (ಸಣ್ಣದಾಗಿ ಕತ್ತರಿಸಿದ್ದು)
ಹಸಿರು ಮೆಣಸಿನಕಾಯಿ – 1 (ಸಣ್ಣದಾಗಿ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು – 2 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬ್ರೆಡ್ – 4-6
ಎಣ್ಣೆ/ಬೆಣ್ಣೆ – ಫ್ರೈ ಮಾಡಲು
ತಯಾರಿಸುವ ವಿಧಾನ:
ಮೊದಲು ಒಂದು ಬಟ್ಟಲಿನಲ್ಲಿ ರವಾ, ಮೊಸರು, ಜೀರಿಗೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಈರುಳ್ಳಿ, ಟೊಮಾಟೋ, ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಸೇರಿಸಿ. ಬೇಕಿದ್ದರೆ ಸ್ವಲ್ಪ ಹಾಲು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ತಯಾರಿಸಿ.
ಈಗ ಬ್ರೆಡ್ ತುಂಡಿನ ಮೇಲೆ ಈ ಮಿಶ್ರಣವನ್ನು ಹರಡಿ. ಈಗ ತವಾಗೆ ಸ್ವಲ್ಪ ಎಣ್ಣೆ/ಬೆಣ್ಣೆ ಹಾಕಿ ಮಿಶ್ರಣ ಹರಡಿದ ಬದಿಯಿಂದ ಬ್ರೆಡ್ ಬೇಯಿಸಿರಿ. ಎರಡು ಬದಿಯಿಂದ ಗೋಲ್ಡನ್ ಬ್ರೌನ್ ಬಣ್ಣ ಬಂದರೆ ಫ್ರೆಂಚ್ ರವಾ ಟೋಸ್ಟ್ ರೆಡಿ.