VIRAL | ಹೊಸ ಜೋಡಿಗೆ ದೊಡ್ಡ ನೀಲಿ ಡ್ರಮ್‌ ಗಿಫ್ಟ್‌ ಕೊಟ್ಟ ಸ್ನೇಹಿತರು, ಎಲ್ಲರಿಗೂ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೀರತ್ ನ ಸೌರವ್ ರಜಪೂತ್ ಕೊಲೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ನವದಂಪತಿಗಳಿಗೆ ನೀಲಿ ಡ್ರಮ್ ಗಿಫ್ಟ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ನೀಲಿ ಡ್ರಮ್ ಉತ್ತರ ಪ್ರದೇಶ ಮಾತ್ರವಲ್ಲ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಇದೇ ಉತ್ತರ ಪ್ರದೇಶದ ಮೀರತ್ ನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನನ್ನು ಕ್ರೂರವಾಗಿ ಕೊಂದು ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಇದೇ ರೀತಿಯ ನೀಲಿ ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ಹಾಕಿ ಮುಚ್ಚಿ ಹಾಕಿದ್ದಳು.

ಇದೀಗ ಇದೇ ರೀತಿಯ ಡ್ರಮ್ ಅನ್ನು ವರನ ಸ್ನೇಹಿತರು ಗಿಫ್ಟಿ ನೀಡಿರುವುದು ಮದುವೆ ಗಂಡಿನ ಮುಜುಗರಕ್ಕೆ ಕಾರಣವಾಗಿದೆ. ವೇದಿಕೆ ಮೇಲಿದ್ದ ವರ ಇದನ್ನು ನೋಡಿ ಆಘಾತಕ್ಕೊಳಗಾದರೆ, ಪಕ್ಕದಲ್ಲೇ ಇದ್ದ ಆತನ ಪತ್ನಿ ನಕ್ಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!