ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವತೆಗಳೆಲ್ಲ ಸೇರಿ ರಾಕ್ಷಸನನ್ನು ಕೊಲ್ಲಲು ಬಂದರು ಎಂದು ಪುರಾಣಗಳಲ್ಲಿ ಓದುತ್ತೇವೆ. ಭಗವಾನ್ ವಿಷ್ಣುವು ರಾಕ್ಷಸರನ್ನು ಕೊಲ್ಲಲು ಅನೇಕ ಅವತಾರಗಳನ್ನು ತಾಳಿದನು. ರಾಕ್ಷ, ದುಷ್ಟರ ಸಂಹಾರದಲ್ಲಿ ಸ್ನೇಹಿತರ ಪಾತ್ರವೇನು..? ಈ ಸ್ನೇಹಿತರ ದಿನದಂದು ಪುರಾಣ ಪ್ರಸಿದ್ಧ ಸ್ನೇಹಿತರ ತ್ಯಾಗವನ್ನು ತಿಳಿದುಕೊಳ್ಳೋಣ…
ಸುಗ್ರೀವನ ಜೊತೆ ರಾಮನ ಸ್ನೇಹ..ರಾವಣನ ಸಂಹಾರದ ಆರಂಭ..
ರಾಮ ಮತ್ತು ಸುಗ್ರೀವನ ಸ್ನೇಹದಿಂದ ಲಂಕಾ ರಾವಣನನ್ನು ಸಂಹರಿಸಲು ಸಾಧ್ಯವಾಯಿತು. ರಾಮಾಯಣದಲ್ಲಿ ರಾಮ ಮತ್ತು ಸುಗ್ರೀವನ ಸ್ನೇಹ ವಾಲಿಯನ್ನೂ ಕೊಂದಿತು. ರಾಮನು ಸುಗ್ರೀವನು ಒದಗಿಸಿದ ವಾನರ ಸೇನೆಯ ಸಹಾಯದಿಂದ ರಾವಣಾಸುರನನ್ನು ಕೊಂದನು. ಸೀತಾಮಾತೆಯನ್ನು ಬಂಧನ ಮುಕ್ತವಾಗುವಂತೆ ಮಾಡಲು ಸಹಕಾರಿಯಾಯಿತು. ರಾವಣನ ಅಂತ್ಯದ ಬಳಿಕವೂ ಸುಗ್ರೀವ ಮತ್ತು ರಾಮನ ಸ್ನೇಹ ಮುಂದುವರೆಯಿತು.
ದಶರಥ ಮತ್ತು ಜಟಾಯು ನಡುವಿನ ಸ್ನೇಹ
ಶ್ರೀರಾಮನಿಗೆ ಸೀತಾಮಾತೆಯ ಜಾಡು ಕಂಡುಹಿಡಿಯಲು ಸಹಾಯ ಮಾಡಿದ್ದೇ ಜಟಾಯು ಪಕ್ಷಿ. ರಾಮನಿಗೆ ಜಟಾಯು “ ನಾನು ನಿನ್ನ ತಂದೆಯ ಗೆಳೆಯ” ಎಂದು ತನ್ನನ್ನು ಪರಿಚಯಿಸಿಕೊಂಡಿತು. ರಾವಣನ ಜಾಡು ಹೇಳಿ ಪ್ರಾಣ ಬಿಟ್ಟ, ಜಟಾಯುವನ್ನು ಸ್ವತಃ ಶ್ರೀರಾಮನೇ ಅದರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದನು.
ರಾಮ ಮತ್ತು ಆಂಜನೇಯನ ಸ್ನೇಹ
ಹಾಗೆಯೇ ರಾಮಾಯಣದಲ್ಲಿ ಶ್ರೀರಾಮ ಮತ್ತು ಆಂಜನೇಯನ ಸ್ನೇಹ ಬಳ್ಳಿಯಂತೆ ಹೆಣೆದು ಭಕ್ತಿಯ ಬಂಧದ ರೂಪ ಪಡೆಯುತ್ತದೆ. ಯುಗಯುಗಗಳಿಂದಲೂ, ದೇವರು ಕೆಲವು ರೂಪದಲ್ಲಿ ಜನರಿಗೆ ಸ್ನೇಹದ ಮೌಲ್ಯವನ್ನು ಸೂಚಿಸುತ್ತಿದ್ದಾನೆ. ರಾವಣನು ಸೀತಮ್ಮನನ್ನು ಅಪಹರಿಸಿದ ನಂತರ, ರಾಮನು ಹನುಮಂತನನ್ನು ಭೇಟಿಯಾಗುತ್ತಾನೆ. ಭೇಟಿಯಾದ ಬಳಿಕ ಅವರಿಬ್ಬರ ಸ್ನೇಹ, ಭಕ್ತಿಯಾಗಿ ಪ್ರಹರಿಸುತ್ತದೆ. ಹನುಮಂತನಿಲ್ಲದ ರಾಮ..ರಾಮಾಯಣವನ್ನು ಊಹಿಸಲೂ ಸಾಧ್ಯವಿಲ್ಲ.
ಮಹಿಷಾಸುರನನ್ನು ಕೊಂದ ದುರ್ಗಾದೇವಿಗೆ..ದೇವತೆಯರ ಸಹಾಯ
ಆದಿ ಪರಾಶಕ್ತಿ, ಮಹಾರಾಕ್ಷಸ ಮಹಿಷಾಸುರನನ್ನು ಸಂಕೇತವಾಗಿ ವಿಜಯದಶಮಿ ನವರಾತ್ರಿ ಎಂದು ಆಚರಿಸಲಾಗುತ್ತದೆ. ಅಂತಹ ಮಹಿಷಾಸುರನನ್ನು ಸಂಹರಿಸಲು ದುರ್ಗಾದೇವಿಗೆ ದೇವತೆಗಳೆಲ್ಲರೂ ಒಗ್ಗಟ್ಟಾಗಿ ತಮ್ಮ ಆಯುಧಗಳನ್ನು ಅರ್ಪಿಸಿದರು. ಇದು ತಮ್ಮ ಜವಾಬ್ದಾರಿ ಎಂದು ಭಾವಿಸಿದರು. ಲೋಕಗಳು ಸುಭಿಕ್ಷವಾಗಿರಲು, ರಾಕ್ಷಸನನ್ನು ಸಂಹರಿಸಲು ದೇವತೆಗಳೆಲ್ಲರೂ ತಮ್ಮ ಆಯುಧಗಳನ್ನು ಅರ್ಪಿಸಿ, ದೇವತೆಗಳ ನಡುವಿನ ಹೊಂದಾಣಿಕೆ, ಸ್ನೇಹವನ್ನು ಜಗತ್ತಿಗೆ ಸಾರಿದರು.
ಕೃಷ್ಣ-ಕುಚೇಲನ ಸ್ನೇಹ ಶ್ರೀಮಂತ, ಬಡವರನ್ನು ಮೀರಿದ್ದು
ದ್ವಾಪರ ಯುಗದಲ್ಲೂ ಶ್ರೀಕೃಷ್ಣನ ಪ್ರಾಣಸ್ನೇಹಿತ ಕುಚೇಲ. ಶ್ರೀಕೃಷ್ಣ ಶ್ರೀಮಂತಿಕೆಗೆ ನಿದರ್ಶನವಾದರೆ, ಕುಚೇಲ ಬಡತನದ ವ್ಯಾಖ್ಯಾನ. ಆದರೂ ಇವರಿಬ್ಬರ ನಡುವಿನ ಸ್ನೇಹಕ್ಕೆ ಇದ್ಯಾವುದೂ ಅಡ್ಡಿಯಾಗಿರಲಿಲ್ಲ.
ದುರ್ಯೋಧನ ಮತ್ತು ಮಾನಸಪುತ್ರ ಕರ್ಣರ ಸ್ನೇಹ
ಮಹಾಭಾರತದಲ್ಲಿ, ರಾಜ ದುರ್ಯೋಧನ ಮತ್ತು ಮಾನಸಪುತ್ರ ಕರ್ಣ ನಡುವಿನ ಸ್ನೇಹವು ಇತಿಹಾಸದಲ್ಲಿ ದಾಖಲಾಗಿದೆ. ಅವರ ಸ್ನೇಹ ಅಮೂಲ್ಯವಾದುದು. ಕರ್ಣ ತನ್ನ ಗೆಳೆಯನಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಇತಿಹಾಸ ಬರೆದಿದ್ದಾನೆ. ಧರ್ಮಯುದ್ಧದಲ್ಲಿ ಕೌರವರ ಪರವಾಗಿ ನಿಂತ ಕರ್ಣ ತಾನು ಮಾಡುತ್ತಿರುವುದು ಧರ್ಮವಲ್ಲವೆಂದು ತಿಳಿದಿದ್ದರೂ ಹತರಾದರವರಲ್ಲಿ ಒಬ್ಬನಾದ. ಗೌರವಾನ್ವಿತ ಗೆಳೆಯ ದುರ್ಯೋಧನ ಪಕ್ಕ ನಿಂತ. ಇತಿಹಾಸದಲ್ಲಿ ತನ್ನ ಹೆಸರು ಕಳಂಕಿತವಾಗುತ್ತದೆ ಎಂದು ಗೊತ್ತಿದ್ದರೂ ಗೆಳೆಯನಿಗೆ ಕೊಟ್ಟ ಮಾತಿಗೆ ಪ್ರಾಣವನ್ನೇ ಪಣಕ್ಕಿಟ್ಟ ಮಹಾನ್ ಗೆಳೆಯ ಕರ್ಣ.
ಹೀಗೆ ಪುರಾಣ, ಇತಿಹಾಸಗಳಲ್ಲಿಯೂ ಸ್ನೇಹಕ್ಕೆ ಹೆಸರುವಾಸಿಯಾದ ಅದೆಷ್ಟೋ ಕತೆಗಳಿವೆ. ಅವೆಲ್ಲವೂ ಇಂದಿನ ಪೀಳಿಗೆಗೆ ಮಾರ್ಗದರ್ಶಿ.