Sunday, November 2, 2025

ಇನ್ಮುಂದೆ ತಮಿಳುನಾಡಿನಲ್ಲಿ ಪ್ರಾಣಿ ಸಾಕಲು ಪರವಾನಗಿ ಕಡ್ಡಾಯ: ರೂಲ್ಸ್ ಪಾಲಿಸದಿದ್ರೆ ಬೀಳುತ್ತೆ ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನಾಯಿಗಳನ್ನು ಸಾಕಲು ಅಥವಾ ಈಗಾಗಲೇ ಇರುವ ಶ್ವಾನಗಳಿಗೆ ಪರವಾನಗಿ ಪಡೆಯಲು ನಿಯಮ ರೂಪಿಸಿದೆ. ನವೆಂಬರ್ 24 ರೊಳಗೆ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ಪರವಾನಗಿ ಪಡೆಯಬೇಕು. ಇಲ್ಲವಾದಲ್ಲಿ ಮಾಲೀಕರಿಗೆ 5 ಸಾವಿರ ದಂಡ ವಿಧಿಸಲಾಗುವುದು ಎಂಬ ನಿರ್ಣಯವನ್ನು ಅಂಗೀಕರಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳ ಸಂಚಾರದಿಂದ ತ್ಯಾಜ್ಯವು ಜನರಿಗೆ ಅನಾನುಕೂಲತೆ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಅನಿಯಂತ್ರಿತ ಸಾಕುಪ್ರಾಣಿ ಮಾಲೀಕತ್ವದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಇಂದು ಕಾರ್ಪೊರೇಷನ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಚೆನ್ನೈ ನಗರ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ- 1998 ಮತ್ತು ನಿಯಮಗಳು 2023 ರ ಸೆಕ್ಷನ್ 292 ರ ಪ್ರಕಾರ, ಜಿಸಿಸಿ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ನಿವಾಸಿಗಳು ಸಾಕುಪ್ರಾಣಿಗಳನ್ನು ಕಾನೂನುಬದ್ಧವಾಗಿ ಸಾಕಲು ಪರವಾನಗಿ ಕಡ್ಡಾಯವಾಗಿ ಪಡೆಯಬೇಕು. ನೋಂದಣಿಯನ್ನು ಸುಗಮಗೊಳಿಸಲು ಮತ್ತು ಸಾಕುಪ್ರಾಣಿ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲು ಚೆನ್ನೈ ಕಾರ್ಪೊರೇಷನ್ ಆಗಸ್ಟ್ 2023 ರಲ್ಲಿ ಸಾಕುಪ್ರಾಣಿ ಮಾಲೀಕರಿಗೆ ಆನ್‌ಲೈನ್ ಪರವಾನಗಿ ವ್ಯವಸ್ಥೆಯನ್ನು ಪರಿಚಯಿಸಿದೆ.

ಹೊಸ ನಿಯಮಗಳು:

ಹೊಂದಬೇಕು.

  • ಮಾಲೀಕರು ತಮ್ಮ ಸಾಕುಪ್ರಾಣಿಗಳ ಸಂತಾನೋತ್ಪತ್ತಿ ನಿಯಂತ್ರಣ, ಲಸಿಕೆ, ಕ್ರಿಮಿನಾಶಕ ಮತ್ತು ಪರವಾನಗಿಯನ್ನು
  • ಸಾಕುಪ್ರಾಣಿಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಬಾರದು.
  • ಸಾಕುಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವಾಗ ಕಡ್ಡಾಯವಾಗಿ ಅವುಗಳಿಗೆ ಹಗ್ಗ, ಮುಖ ಕವಚ ಹಾಕಬೇಕು.
  • ಸಾರ್ವಜನಿಕ ಸ್ಥಳಗಳಲ್ಲಿ ಸಾಕುಪ್ರಾಣಿಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಅದರ ಮಾಲೀಕರದ್ದು.
  • ಪ್ರಾಣಿಗಳನ್ನು ಸಾಕಲು ಮಾಲೀಕರಿಗೆ ಪರವಾನಗಿ ಪಡೆಯಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಂದರೆ, ನವೆಂಬರ್ 24 ರವರೆಗೂ ಗಡುವು ನೀಡಲಾಗಿದೆ.
  • ಪರವಾನಗಿ ಪಡೆಯದೆ ಪ್ರಾಣಿಗಳನ್ನು ಸಾಕುತ್ತಿರುವವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
  • ಸಾರ್ವಜನಿಕ ಸ್ಥಳಗಳಿಗೆ ಸಾಕುಪ್ರಾಣಿಗಳನ್ನು ಕರೆತಂದಾಗ ಅವುಗಳಿಗೆ ಹಗ್ಗ, ಮುಖಕವಚ ಹಾಕದಿದ್ದರೆ 500 ರೂಪಾಯಿ ದಂಡ.
  • ವಲಯ ಆರೋಗ್ಯ ಮತ್ತು ನೈರ್ಮಲ್ಯ ಅಧಿಕಾರಿಗಳು ಸೇರಿದಂತೆ ಕಾರ್ಪೋರೇಷನ್​ ಅಧಿಕಾರಿಗಳು ಮನೆ-ಮನೆಗೆ ತೆರಳಿ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸುವರ ವಿರುದ್ಧ ದಂಡ ವಿಧಿಸಿ ಸಂಗ್ರಹಿಸಲಿದ್ದಾರೆ.
  • ಹೊಸ ನಿಯಮಗಳು ನವೆಂಬರ್ 24 ರಂದು ಅಧಿಕೃತವಾಗಿ ಜಾರಿಗೆ ಬರಲಿದೆ .

error: Content is protected !!