ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇನ್ಮುಂದೆ ಪ್ರಾಥಮಿಕ ಕೃಷಿ ಸಾಲ ಸಂಘಗಳು(PACS) ಸಾಮಾನ್ಯ ಸೇವಾ ಕೇಂದ್ರಗಳು (CSC) ಒದಗಿಸುವ ಸೇವೆಗಳನ್ನು ಒದಗಿಸುತ್ತವೆ.
ಈ ಕುರಿತು ದೆಹಲಿಯ ವಿಜ್ಞಾನ ಭವನದಲ್ಲಿ ಔಪಚಾರಿಕವಾಗಿ ಘೋಷಿಸಿದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು, ಉಪಕ್ರಮದ ಅಡಿಯಲ್ಲಿ, PACS ದೇಶದ 13 ಕೋಟಿ ರೈತರು ಸೇರಿದಂತೆ ಗ್ರಾಮೀಣ ನಾಗರಿಕರಿಗೆ ಬ್ಯಾಂಕಿಂಗ್, ವಿಮೆ, ಆಧಾರ್ ನೋಂದಣಿ, ಆರೋಗ್ಯ ಸೇವೆಗಳು, ಕಾನೂನು ಸೇವೆಗಳು ಮತ್ತು ಪ್ರಧಾನ ಮಂತ್ರಿ ಕಲ್ಯಾಣ ಯೋಜನೆಗಳಂತಹ 300 ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತದೆ ಎಂದರು.
ಅಸ್ತಿತ್ವದಲ್ಲಿರುವ ಒಂದು ಲಕ್ಷ ಪಿಎಸಿಎಸ್‌ಗಳಲ್ಲಿ 17,000 ಸಿಎಸ್‌ಸಿಗಳಾಗಿ ಈಗಾಗಲೇ ಆನ್‌ಬೋರ್ಡ್‌ನಲ್ಲಿವೆ ಎಂದು ಹೇಳಿದರು.
ಈಗಾಗಲೇ 6,000 ಕ್ಕೂ ಹೆಚ್ಚು ಪಿಎಸಿಎಸ್‌ಗಳು ನಾಗರಿಕರಿಗೆ ತಮ್ಮ ಸೇವೆಯನ್ನು ಪ್ರಾರಂಭಿಸಿವೆ. ಪಂಚಾಯತ್ ಮಟ್ಟದಲ್ಲಿ PACS ಅನ್ನು ಆರ್ಥಿಕವಾಗಿ ಶಕ್ತಿಯುತ ಘಟಕಗಳನ್ನಾಗಿ ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಪಿಎಸಿಎಸ್ ಮಾಡಲು ಮತ್ತು ಪ್ರತಿ ಪಂಚಾಯಿತಿಯಲ್ಲಿ ಬಹುಪಯೋಗಿ ಪಿಎಸಿಎಸ್ ರಚಿಸಲು ಈ ವರ್ಷದ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.