ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಹಿಂದು ಮಸೂದೆಯೊಂದು ಮಂಡನೆಯಾಗುತ್ತಿದೆ. ಹೌದು, ಜಾರ್ಜಿಯಾದಲ್ಲಿ ಹಿಂದುಫೋಬಿಯಾ ಮಸೂದೆ ಮಂಡನೆಯಾಗಲಿದೆ. ಈ ಬಿಲ್ ಹಿಂದುಗಳ ವಿರುದ್ಧ ದ್ವೇಷ, ದೌರ್ಜನ್ಯ, ಹಾಗೂ ಹಿಂದುಗಳ ಮೇಲೆ ನಡೆಯುತ್ತಿರುವ ಕ್ರೈಂ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನೆರವಾಗಲಿದೆ.
ಅಮೆರಿಕದಲ್ಲಿ ಹಿಂದುಗಳ ವಿರುದ್ಧದ ದ್ವೇಷದ ಅಪರಾಧಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವ ಮೊದಲ ಕಾನೂನು ಇದಾಗಲಿದೆ. ಮಸೂದೆಯಲ್ಲಿ ‘ಹಿಂದುಫೋಬಿಯಾ’ವನ್ನು ಹಿಂದು ಧರ್ಮದ ಬಗ್ಗೆ ವೈರತ್ವ, ವಿನಾಶಕಾರಿ ಮತ್ತು ಅವಮಾನಕರ ಧೋರಣೆ ಎಂದು ವ್ಯಾಖ್ಯಾನಿಸಲಾಗಿದೆ.
2023-2024 ರಲ್ಲಿ ಬಂದ ವರದಿಯ ಪ್ರಕಾರ, ಅಮೆರಿಕದಲ್ಲಿ ಸುಮಾರು 25 ಲಕ್ಷ ಹಿಂದುಗಳು ವಾಸಿಸುತ್ತಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಸುಮಾರು 0.9% ರಷ್ಟಿದೆ. ಇವರಲ್ಲಿ 40,000 ಕ್ಕೂ ಹೆಚ್ಚು ಹಿಂದುಗಳು ಜಾರ್ಜಿಯಾದಲ್ಲಿ ವಾಸಿಸುತ್ತಿದ್ದಾರೆ.