ವಿಜ್ಞಾನದ ಹಿಡಿದು ಒಟಿಟಿಯ ಸಿರೀಸ್ ತನಕ…ಮೆಟ್ರೋದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮಾತುಕತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಈ ವೇಳೆ ಪ್ರಧಾನಿ ಮೆಟ್ರೋ ಬೋಗಿಗಳಲ್ಲಿ ತುಂಬಿದ್ದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಾ ಸಾಗಿದರು.

ದೆಹಲಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಧಾನಿ ಅಲ್ಲಿ ಭಾಷಣ ಮಾಡುತ್ತಾ, ಹಲವು ವಿಚಾರಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳಂತೆ ನಾನು ಇಂದು ಮೆಟ್ರೋದಲ್ಲಿ ಪ್ರಯಾಣಿಸಿದೆ. ವಿದ್ಯಾರ್ಥಿಗಳಲ್ಲಿ ಮಾತನಾಡಲು ಸಾಕಷ್ಟು ವಿಚಾರಗಳಿವೆ. ವಿಜ್ಞಾನದ ವಿಷಯಗಳ ಚರ್ಚೆಯಿಂದ ಹಿಡಿದು ಒಟಿಟಿಯಲ್ಲಿ ಬರುವ ಹೊಸ ಸರಣಿಗಳವರೆಗೆ ಅವರು ಯಾವುದೇ ವಿಷಯಗಳನ್ನು ಬಿಡುವುದಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಧಾನಿ ಮೋದಿ ಹೇಳಿದರು.

ವಿದ್ಯಾರ್ಥಿಗಳು ಸೂರ್ಯನ ಕೆಳಗೆ ಇರುವ ಪ್ರತಿಯೊಂದು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಯಾವ ಸಿನಿಮಾ ನೋಡಿದ್ರಿ, ಒಟಿಟಿಯಲ್ಲಿ ಯಾವ ಸಿರೀಸ್ ಚೆನ್ನಾಗಿದೆ. ನೀವು ಆ ರೀಲ್ಸ್ ನೋಡಿದ್ದೀರೋ ಇಲ್ಲವೋ ಹೀಗೆ ಅವರ ಬಳಿ ಚರ್ಚಿಸಲು ಸಾಗರದಷ್ಟು ವಿಚಾರಗಳಿವೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ಟ್ವಿಟ್ಟರ್‌ನಲ್ಲಿ ಮೆಟ್ರೋ ಪ್ರಯಾಣದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಸಹ ಪ್ರಯಾಣಿಕರಾಗಿ ಯುವ ಜನತೆ ಇರುವುದು ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಹಲವು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದು, ಮೋದಿ ಮೆಟ್ರೋ ಪ್ರಯಾಣದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸದಾ ಸುದ್ದಿಯಲ್ಲಿರುವ ನಾನಾ ವಿಚಾರದಲ್ಲಿ ಸುದ್ದಿಯಲ್ಲಿರುವ ದೆಹಲಿ ಮೆಟ್ರೋ ಇಂದು ಪ್ರಧಾನಿ ಪ್ರಯಾಣದ ಮೂಲಕ ಸುದ್ದಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!