ಚಹಾ ಮಾರಾಟದಿಂದ ಕ್ಯಾಮೆರಾ ಮುಂದೆ: ಡಾಲಿ ಚಾಯ್‌ವಾಲಾನ ವಿಭಿನ್ನ ಯಶೋಗಾಥೆ!

ಕೇವಲ 7 ರೂ. ಕಪ್‌ಗಾಗಿ ಚಹಾ ಮಾರುತ್ತಿದ್ದ ಒಬ್ಬ ಚಹಾ ಮಾರಾಟಗಾರ ಇಂದು ಲಕ್ಷಾಂತರ ಜನರನ್ನು ತನ್ನ ಚಹಾ ತಯಾರಿಸುವ ವಿಭಿನ್ನ ಶೈಲಿ, ವಿಶಾಲವಾದ ನಗು ಮತ್ತು ವ್ಯಕ್ತಿತ್ವವದಿಂದ ಸಾಮಾಜಿಕ ಮಾಧ್ಯಮ ಸೆಲೆಬ್ರಿಟಿಯಾಗಿದ್ದಾರೆ. ನಾಗ್ಪುರ ಮೂಲದ ಸುನಿಲ್ ಪಾಟೀಲ್, ಇದೀಗ ಎಲ್ಲರಿಗೂ ಪರಿಚಿತರಾದ ಡಾಲಿ ಚಾಯ್‌ವಾಲಾ, ತಮ್ಮ ಜೀವಿತ ಕಥೆಯನ್ನು ಪ್ರೇರಣಾದಾಯಕ ವ್ಯವಹಾರ ಮಾದರಿಯಾಗಿ ರೂಪಿಸಿಕೊಂಡಿದ್ದಾರೆ.

ಡಾಲಿಯ ಪಯಣ
1998ರಲ್ಲಿ ನಾಗ್ಪುರದ ಬಡ ಕುಟುಂಬದಲ್ಲಿ ಜನಿಸಿದ ಸುನಿಲ್‌ ಪಾಟೀಲ್, ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಸಹಾಯಕ್ಕಾಗಿ ಚಹಾ ಮಾರಾಟ ಪ್ರಾರಂಭಿಸಿದರು. ಶಿಕ್ಷಣದ ಕೊರತೆಯಿದ್ದರೂ, ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಚಹಾ ತಯಾರಿಸುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಅವರ ಕೈಚಲನೆ, ನಗು, ಹಾಗೂ ಚಹಾ ಸರ್ವಿಂಗ್‌ನ ವಿಶಿಷ್ಟ ವಿಧಾನಗಳು ಜನರ ಗಮನ ಸೆಳೆಯುತ್ತಾ ಹೋದವು.

ಇದೆಲ್ಲವನ್ನ ಸೆರೆಹಿಡಿದವು Instagram, YouTube ಮುಂತಾದ ಪ್ಲಾಟ್‌ಫಾರ್ಮ್‌ಗಳು. ಸಣ್ಣ ವಿಡಿಯೋಗಳು ವೈರಲ್‌ ಆಗುತ್ತಿದಂತೆ, ಡಾಲಿ ಚಾಯ್‌ವಾಲಾ ಎಂಬ ಹೆಸರೂ ದೇಶಾದ್ಯಂತ ಪ್ರಸಿದ್ಧಿಯ ಹಾದಿ ಹಿಡಿಯಿತು.

ಬಿಲ್ ಗೇಟ್ಸ್ ಅವರ ಜೊತೆ ಫೀಚರ್ ಆದ ಬಳಿಕ…
2024ರ ಫೆಬ್ರವರಿಯಲ್ಲಿ ಬೃಹತ್ ಬೆಳವಣಿಗೆವೊಂದರ ಸಾಕ್ಷಿಯಾಯಿತು – ಬಿಲ್ ಗೇಟ್ಸ್ ಅವರೊಂದಿಗೆ ಮಾಡಿದ ಒಂದು ಚಹಾ ವಿಡಿಯೋವನ್ನು ಗೇಟ್ಸ್ ಅವರೇ ತಮ್ಮ ಪೇಜ್‌ನಲ್ಲಿ ಶೇರ್ ಮಾಡಿದ ಮೇಲೆ ಡಾಲಿಯ ಸಾಮಾಜಿಕ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಜಿಗಿಯಿತು. ಈ ಅಪರೂಪದ ಕ್ಷಣದ ನಂತರ, ಡಾಲಿಯ ಯುಟ್ಯೂಬ್ ಚಾನಲ್‌ಗಳಲ್ಲಿ ಫಾಲೋವರ್ಸ್‌, ಚಂದಾದಾರರು ಹೆಚ್ಚಾಗಿ, ಅವರ ಬ್ರ್ಯಾಂಡ್ ಮೌಲ್ಯದಲ್ಲೂ ಭಾರೀ ಹೆಚ್ಚಳ ಕಂಡುಬಂತು.

ಈಗ ಡಾಲಿಯ Instagram‌ನಲ್ಲಿ 4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. YouTube ಚಾನಲ್‌ಗೆ 2 ಮಿಲಿಯನ್ ಚಂದಾದಾರರು. ಪ್ರನಿಯಮಿತವಾಗಿ ಪ್ರತಿದಿನ 350ರಿಂದ 500 ಕಪ್ ಚಹಾವನ್ನು ಮಾರಾಟ ಮಾಡುತ್ತಾರೆ ಮತ್ತು ಅವರು ಇನ್ನೂ ತಮ್ಮ ಅಂಗಡಿಯನ್ನು ನಿರ್ವಹಿಸುತ್ತಿದ್ದರೂ, ಅವರ ವ್ಯಾಪ್ತಿಯು ನಾಗ್ಪುರದ ಗಡಿಗಳನ್ನು ಮೀರಿ ಹೋಗಿದೆ. ಅವರು ಈಗ ಒಂದು ಶೋಗೆ 5 ಲಕ್ಷದವರೆಗೂ ಶುಲ್ಕ ವಿಧಿಸುತ್ತಿದ್ದಾರೆ. ಬ್ರ್ಯಾಂಡ್ ಕಳುಹಿಸಿದ ಪ್ರೊಮೋ, ಜಾಹೀರಾತು ಆದಾಯ ಮತ್ತು ಇವೆಲ್ಲವೂ ಸೇರಿ 10 ಲಕ್ಷಕ್ಕೂ ಹೆಚ್ಚು ನಿವ್ವಳ ಮೌಲ್ಯ ಹೊಂದಿದ್ದಾರೆ ಎನ್ನಲಾಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!