April 3, 2026
Friday, April 3, 2026
spot_img

ಪೊಲೀಸ್ ಠಾಣೆಯಿಂದ ಮದುವೆ ಮಂಟಪಕ್ಕೆ: ಫರ್ಮಾನ್‌ ಖಾನ್‌ ಜೊತೆ ಮದುವೆಯಾದ ಮೋನಾಲಿಸಾ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪ್ರಯಾಗ್‌ರಾಜ್ ಕುಂಭಮೇಳದ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಮನೆಮಾತಾಗಿದ್ದ ಇಂದೋರ್‌ನ ಮೊನಾಲಿಸಾ, ಕೊನೆಗೂ ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಿರುವನಂತಪುರಂನ ಅರುಮಾನೂರು ಶ್ರೀ ನೈನಾರ್ ದೇವಸ್ಥಾನದಲ್ಲಿ ಇವರ ವಿವಾಹ ಕಾರ್ಯಕ್ರಮ ನೆರವೇರಿದೆ. ಫರ್ಮಾನ್‌ ಖಾನ್‌ ಜೊತೆಗಿನ ಪ್ರೀತಿಗೆ ಪೋಷಕರು ಒಪ್ಪುತ್ತಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ ದಿನವೇ, ದಿಢೀರ್‌ ಆಗಿ ಮೋನಾಲಿಸಾ ಹಾಗೂ ಫರ್ಮಾನ್‌ ಖಾನ್‌ ಅವರ ವಿವಾಹ ನೆರವೇರಿದೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರದ ಫರ್ಮಾನ್ ಖಾನ್ ಇಂದು ಬೆಳಿಗ್ಗೆ ತಿರುವನಂತಪುರಂನ ತಂಬನೂರು ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದರು. ತನ್ನ ತಂದೆ ಬೇರೊಬ್ಬರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಮೊನಾಲಿಸಾ ದೂರಿನಲ್ಲಿ ತಿಳಿಸಿದ್ದರು. ತಾನು ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದ ಸಂದರ್ಭವನ್ನು ಬಳಸಿಕೊಂಡು, ತನಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.

ಇದರ ನಡುವೆ ಈ ಪ್ರೇಮಿಗಳು ಒಂದಾಗಲು ಕೇರಳದ ಆಡಳಿತಾರೂಢ ನಾಯಕರು ಸಾಥ್ ನೀಡಿದರು. ಅರುಮಾನೂರು ದೇವಸ್ಥಾನದಲ್ಲಿ ನಡೆದ ವಿವಾಹಕ್ಕೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್‌ಕುಟ್ಟಿ ಮತ್ತು ರಾಜ್ಯಸಭಾ ಸಂಸದ ಎ.ಎ. ರಹೀಮ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !