ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಇಂದಿನಿಂದ ಫ್ಲವರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಇಂದು ಹಾಗೂ ನಾಳೆ ರಜಾದಿನಗಳಾದ ಕಾರಣ ಹೆಚ್ಚಿನ ಮಂದಿ ಲಾಲ್‌ಬಾಗ್‌ಗೆ ಆಗಮಿಸುವ ನಿರೀಕ್ಷೆ ಇದೆ, ವೀಕೆಂಡ್‌ಗಳಲ್ಲಿ ಟಿಕೆಟ್ ದರ ಕೊಂಚ ಏರಿಕೆ ಮಾಡಿದ್ದು, ವಯಸ್ಕರು 80 ರೂಪಾಯಿ ನೀಡಿ ಟಿಕೆಟ್ ಪಡೆಯಬಹುದಾಗಿದೆ.
ಫ್ಲವರ್ ಶೋ ಜತೆಗೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಟ್ರಾಫಿಕ್ ಸಮಸ್ಯೆಯ ಕಾರಣ ಆದಷ್ಟು ಮೆಟ್ರೋ ಬಳಸಿ ಎಂದು ತೋಟಗಾರಿಕಾ ಇಲಾಖೆ ಮನವಿ ಮಾಡಿದೆ.
ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಕೆಂಗಲ್ ಹನುಮಂತಯ್ಯ ಹಾಗೂ ವಿಧಾನಸೌಧ ಥೀಮ್‌ನಲ್ಲಿ ಫ್ಲವರ್ ಶೋ ನಡೆಯಲಿದೆ.