March 31, 2026
Tuesday, March 31, 2026
spot_img

ನಾಳೆಯಿಂದ ಸಾಮಾನ್ಯ ಜನರ ಜೀವನ ದುಬಾರಿ: ನೀರು, ಕರೆಂಟ್‌, ಟೋಲ್‌ & ಮೋರ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ನಾಳೆಯಿಂದ ನೂತನ ಆರ್ಥಿಕ ವರ್ಷದ ಆರಂಭವಾಗಲಿದೆ. ಹೀಗಾಗಿ ಹಲವು ವಸ್ತು ಹಾಗೂ ವಿಷಯಗಳ ದರ ಮೊದಲಿನಂತೆ ಇರೋದಿಲ್ಲ. ಎಲ್ಲವೂ ದುಬಾರಿಯಾಗಲಿದೆ.

ನಾಳೆಯಿಂದಲೇ ವಿದ್ಯುತ್‌, ಟೋಲ್‌ ಹಾಗೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯಾಗಲಿದೆ. ಈಗಾಗಲೇ ಜೀವನ ದುಬಾರಿ ಎಂದುಕೊಂಡಿದ್ದ ಜನರಿಗೆ ಜೀವನ ಇನ್ನಷ್ಟು ಕಷ್ಟವಾಗಲಿದೆ.

ಏನೆಲ್ಲಾ ಹೆಚ್ಚಳ?

ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರೂ. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳಿಗೆ 15ರಿಂದ 40 ರೂ. ಅಧಿಕ ಪಾವತಿಸಬೇಕಾಗುತ್ತದೆ. ವಾರ್ಷಿಕ ಪಾಸ್ ದರವು 3,000 ರೂ. ಇದ್ದುದು 3,075 ರೂ.ಗೆ ಏರಿಕೆಯಾಗಲಿದೆ.

ಮತ್ತೊಂದೆಡೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಏ.1ರಿಂದ ಅನ್ವಯವಾಗುವಂತೆ ನೀರಿನ ದರವನ್ನು ಶೇ.3ರಷ್ಟು ಹೆಚ್ಚಳ ಮಾಡಲಿದೆ.

ಇನ್ಯಾವ ಬದಲಾವಣೆ?
ಹೊಟೇಲ್‌ಗಳಲ್ಲಿ ಬಿಲ್ ಪಾವತಿ 1 ಲಕ್ಷ ರೂ. ದಾಟಿದರೆ ಪ್ಯಾನ್ ಕಡ್ಡಾಯ
ರೈಲು ಹೊರಡುವ 8 ಗಂಟೆ ಮೊದಲು ಮುಂಗಡ ಟಿಕೆಟ್ ರದ್ದುಪಡಿಸಿದರೆ ರೀಫಂಡ್ ಸಿಗುವುದಿಲ್ಲಟೋಲ್‌ಗಳಲ್ಲಿ ನಗದು ಪಾವತಿ ಸಂಪೂರ್ಣ ಸ್ಥಗಿತ
ಹೊಸ ಆದಾಯ ತೆರಿಗೆ ಕಾಯಿದೆ ಜಾರಿ ಬ್ಯಾಂಕ್‌ಗಳಲ್ಲಿಹಣಕಾಸು ವರ್ಷದಲ್ಲಿ10 ಲಕ್ಷ ರೂ. ಒಳಗಿನ ಹಣ ಠೇವಣಿಗೆ ಪ್ಯಾನ್ ನಮೂದಿಸುವ ಅಗತ್ಯವಿಲ್ಲ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !