January17, 2026
Saturday, January 17, 2026
spot_img

ಅರಿಶಿಣ ಶಾಸ್ತ್ರದಿಂದ ಸಪ್ತಪದಿವರೆಗೆ.. ನ್ಯೂಜಿಲೆಂಡ್‌ ವರನ ಕೈಹಿಡಿದ ಕನ್ನಡದ ಹುಡುಗಿ

ಹೊಸದಿಗಂತ ವರದಿ ದಾವಣಗೆರೆ:

ನಗರದ ಖಾಸಗಿ ರೆಸಾರ್ಟ್ ನಲ್ಲಿ ನ್ಯೂಜಿಲೆಂಡ್ ದೇಶದ ವರನೊಬ್ಬ ಹಿಂದೂ ಸಂಪ್ರದಾಯದಂತೆ ಕನ್ನಡ ಯುವತಿ ಕೈಹಿಡಿಯುವ ಮೂಲಕ ಗಮನ ಸೆಳೆದಿರುವುದು ಬುಧವಾರ ವರದಿಯಾಗಿದೆ.

ನ್ಯೂಜಿಲೆಂಡ್ ವಾಸಿಯಾದ ಕ್ಯಾಂಪಬೆಲ್ ವಿಟವರ್ಥ್ ಹಾಗೂ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ವಾಸಿ ಪೂಜಾ ನಾಗರಾಜ್ ಅಪರೂಪದ ಮದುವೆಗೆ ಉಭಯ ಕುಟುಂಬಸ್ಥರು, ಬಂಧು-ಮಿತ್ರರು ಸಾಕ್ಷಿಯಾದರು. ನ್ಯೂಜಿಲೆಂಡ್ ದೇಶದ ವರ ಚಳ್ಳಕೆರೆಯ ಪಿ.ನಾಗರಾಜ, ರಾಣಿ ನಾಗರಾಜ್ ದಂಪತಿ ಪುತ್ರಿ, ನ್ಯೂಜಿಲೆಂಡ್ ನಲ್ಲಿ ಕೆಲಸ ಮಾಡುತ್ತಿರುವ ಪೂಜಾ ಜೊತೆಗೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರು. ವಧು-ವರರ ಅರಿಷಿಣ ಕಾರ್ಯ, ವಿವಾಹ ಸಂಪ್ರದಾಯ, ತಾಳಿ ಕಟ್ಟುವ ಕಾರ್ಯಗಳಿಗೆ ಉಭಯ ಕುಟುಂಬದವರು ಹಾಜರಿದ್ದು, ನವ ಜೋಡಿಗೆ ಹರಸಿದರು.

ತಮ್ಮ ಮಗಳ ಇಚ್ಛೆಯಂತೆ ನ್ಯೂಜಿಲೆಂಡ್ ವರನಿಗೆ ಮಗಳನ್ನು ಧಾರೆ ಎರೆಯುವ ಮೂಲಕ ಪಿ.ನಾಗರಾಜ, ರಾಣಿ ದಂಪತಿ ಆಶೀರ್ವದಿಸಿದರು. ನ್ಯೂಜಿಲೆಂಡ್ ವರನಿಗೆ ಭಾರತದ, ಅದರಲ್ಲೂ, ಅಪ್ಪಟ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ತನ್ನ ಮದುವೆ ವಿಶೇಷ ರೀತಿಯಲ್ಲಿ ಆಗುತ್ತಿರುವುದು ಖುಷಿಗೆ ಕಾರಣವಾಗಿತ್ತು. ವರನ ಹೆತ್ತವರು ಸಹ ಭಾರತದ ಸಾಂಪ್ರಾದಾಯಿಕ ಉಡುಪಿನಲ್ಲಿ ಗಮನ ಸೆಳೆದರು. ವರನ ತಾಯಿ ಸೀರೆಯುಟ್ಟಿದ್ದರೆ, ತಂದೆ ಸ್ಥಳೀಯ ಶೈಲಿಯಲ್ಲಿ ಶರ್ಟ್, ಪಂಚೆ, ಶಲ್ಯ ಧರಿಸಿದ್ದರು. ಭಾರತ-ನ್ಯೂಜಿಲೆಂಡ್ ದೇಶವಾಸಿಗಳ ಮದುವೆಯು ರೆಸಾರ್ಟ್ ನಲ್ಲಿ ಸಂಭ್ರಮದ ವಾತಾವರಣಕ್ಕೆ ಕಾರಣವಾಗಿತ್ತು.

Must Read

error: Content is protected !!