ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪೂನಮ್ ಪಾಂಡೆ ನಿಧನ ಹೊಂದಿದ್ದಾರೆಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.
ಖ್ಯಾತ ಸೆಲೆಬ್ರಿಟಿಗಳು ಪೂನಂ ಇನ್ನಿಲ್ಲ ಎನ್ನೋದನ್ನು ನೆನೆದು ಕಣ್ಣೀರಿಟ್ಟಿದ್ದರು. ಕ್ಯಾನ್ಸರ್ ಬಗ್ಗೆ ಯಾರಿಗೂ ತಿಳಿದೇ ಇರಲಿಲ್ಲ. ಪೂನಂ ಇಂಥ ದೊಡ್ಡ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟು ಹೇಗೆ ಜೀವನ ಮಾಡ್ತಿದ್ರು ಎಂದು ಸೆಲೆಬ್ರಿಟಿ ಸ್ನೇಹಿತರು ದುಃಖ ಹೊರಹಾಕಿದ್ದರು.
ಇದರ ಜೊತೆಗೆ ಕ್ಯಾನ್ಸರ್ ವಿಷಯವೇ ಹೊರಬರದೇ ಪೂನಂ ಏಕಾಏಕಿ ಸತ್ತಿದ್ದು ಹೇಗೆ? ಸಾಯೋಕೂ ಮೂರು ದಿನದ ಹಿಂದೆ ಆಕ್ಟೀವ್ ಆಗಿ ಪೂನಂ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಹೇಗೆ? ಅಂತ್ಯಕ್ರಿಯೆ ಬಗ್ಗೆ ಯಾವ ಫೋಟೊ ವಿಡಿಯೋ ಯಾಕೆ ಹೊರಬಿದ್ದಿಲ್ಲ ಎನ್ನುವ ಅನುಮಾನಗಳು ಕಾಡಿತ್ತು.
ಆದರೆ ಇದೀಗ ಎಲ್ಲ ಅನುಮಾನಗಳಿಗೂ ಬ್ರೇಕ್ ಬಿದ್ದಿದೆ. ಯಾಕಂದ್ರೆ ಪೂನಮ್ ಪಾಂಡೆ ಬದುಕಿದ್ದಾರೆ. ಹೌದು, ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ಅರಿವು ಇಲ್ಲ, ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಪೂನಮ್ ಮಾಡಿದ ಸ್ಟಂಟ್ ಇದಾಗಿದೆ.
ನಾನು ಸರ್ವಿಕಲ್ ಕ್ಯಾನ್ಸರ್‌ನಿಂದ ಮೃತಪಟ್ಟಿಲ್ಲ. ಆದರೆ ಎಷ್ಟು ಹೆಣ್ಣುಮಕ್ಕಳಿಗೆ ಈ ಕ್ಯಾನ್ಸರ್ ಬಗ್ಗೆ ಮಾಹಿತಿ ಇಲ್ಲ. ಬೇರೆ ಕ್ಯಾನ್ಸರ್‌ಗಳ ರೀತಿ ಈ ಕ್ಯಾನ್ಸರ್ ಇಲ್ಲ, ಇದನ್ನು ಗುಣಪಡಿಸಬಹುದು. ಒಬ್ಬರಿಂದ ಒಬ್ಬರಿಗೆ ಈ ಜಾಗೃತಿ ಹೆಚ್ಚಾಗಲಿ. ಪ್ರತೀ ಮಹಿಳೆಗೂ ಈ ಬಗ್ಗೆ ಮಾಹಿತಿ ಇರಲಿ. ಈ ಖಾಯಿಲೆಗೆ ಕೊನೆ ಹಾಡೋಣ, ಖಾಯಿಲೆ ಬಾರದಂತೆ ತಡೆಗಟ್ಟೋಣ ಎಂದು ಪೂನಂ ಹೇಳಿದ್ದಾರೆ.
ಜನರ ಭಾವನೆಗಳ ಜೊತೆ ಆಟವಾಡಿದ್ದು ತಪ್ಪು ಎಂದು ನೆಟ್ಟಿಗರು ಗರಂ ಆಗಿದ್ದಾರೆ.
Actress Poonam Pandey is alive, issues video on Instagram claiming ‘awareness’ for Cervical Cancer pic.twitter.com/ImopsEx0H1
— ANI (@ANI) February 3, 2024