ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಪೋಷಕರು ಮಗಳ ಮೃತದೇಹವನ್ನು 42 ದಿನಗಳಿಂದ ಉಪ್ಪಿನಲ್ಲಿ ಹೂತಿಟ್ಟು ಪ್ರತಿಭಟಿಸುತ್ತಿದ್ದಾರೆ.
ಯುವತಿ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನ್ಯಾಯ ಸಿಗುವವರೆಗೂ ಮಗಳ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಕೇವಲ ಆತ್ಮಹತ್ಯೆಯ ಬಗ್ಗೆ ಮಾತ್ರ ತನಿಖೆ ನಡೆದಿದೆ. ಆದರೆ ಅತ್ಯಾಚಾರದ ಬಗ್ಗೆ ಯಾವ ಕೇಸ್ ಕೂಡ ದಾಖಲಾಗಿಲ್ಲ. ಅತ್ಯಾಚಾರದ ಕುರಿತು ತನಿಖೆ ಮಾಡುವವರೆಗೂ ಮಗಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಕುಟುಂಬಸ್ತರು ಪಟ್ಟು ಹಿಡಿದಿದ್ದಾರೆ.
ರಂಜಿತ್ ಠಾಕ್ರೆ ಮತ್ತು ಆತನ ಸ್ನೇಹಿತ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದರು. ಅಲ್ಲದೇ ಅವರಿಬ್ಬರು ಹಿಂಸೆ ನೀಡುತ್ತಿದ್ದಾರೆ ಎಂದು ಆಕೆ ಕರೆ ಮಾಡಿ ಹೇಳಿದ್ದರು ಎನ್ನಲಾಗಿದೆ.
ಇದರ ನಂತರ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.