March 25, 2026
Wednesday, March 25, 2026
spot_img

ರಾಜ್ಯಕ್ಕೆ ಮತ್ತಷ್ಟು ಇಂಧನ ಭದ್ರತೆ: ನವ ಮಂಗಳೂರು ಬಂದರಿಗೆ ಬಂತು ಮತ್ತೊಂದು ಹಡಗು!

ಹೊಸದಿಗಂತ ವರದಿ, ಮಂಗಳೂರು:

ಎಲ್ ಪಿಜಿ ಹೊತ್ತ ಇನ್ನೊಂದು ಹಡಗು ನವ ಮಂಗಳೂರು ಬಂದರಿಗೆ ಬುಧವಾರ ಆಗಮಿಸಿದೆ.

ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ತಲಾ ಒಂದೊಂದು ಕಚ್ಚಾತೈಲ, ಎಲ್‌ಪಿಜಿ ಹಡಗು ಮಂಗಳೂರಿಗೆ ಈಗಾಗಲೇ ಆಗಮಿಸಿದ್ದು, ಇಂಧನ ಕೊರತೆ ಕೊಂಚ ಮಟ್ಟಿಗೆ ನೀಗಿದೆ. ಇದರ ಬೆನ್ನಲ್ಲೇ ಬುಧವಾರ ಇನ್ನೊಂದು ಎಲ್‌ಪಿಜಿ ಹಡಗು ಆಗಮಿಸಿತು.

ಇತ್ತೀಚೆಗೆ ವಿದೇಶದಿಂದ ಎಲ್‌ಪಿಜಿ ಹೊತ್ತುಕೊಂಡು ಬಂದ ಶಿವಾಲಿಕ್‌ ಹೆಸರಿನ ಸರಕು ಹಡಗು ನೇರವಾಗಿ ಗುಜರಾತ್‌ ಬಂದರಿಗೆ ತೆರಳಿತ್ತು. ಅಲ್ಲಿ ಅರ್ಧದಷ್ಟು ಎಲ್‌ಪಿಜಿ ಇಳಿಸಿ, ಉಳಿದರ್ಧವನ್ನು ಮಂಗಳೂರಿಗೆ ತರಲಾಗುತ್ತದೆ ಎಂದು ಎನ್‌ಎಂಪಿಎಗೆ ತಿಳಿಸಲಾಗಿದ್ದರೂ, ನೌಕೆ ಬಂದಿರಲಿಲ್ಲ.

ಶಿವಾಲಿಕ್‌ ಹಡಗಿನಿಂದ ಸಂಪೂರ್ಣ ಎಲ್‌ಪಿಜಿಯನ್ನು ಗುಜರಾತ್‌ನಲ್ಲೇ ಇಳಿಸಲಾಗಿತ್ತು. ಹೀಗೆ ಇಳಿಸಿದ ಎಲ್‌ಪಿಜಿಯನ್ನು ಇನ್ನೊಂದು ಸರಕು ಹಡಗಿನ ಮೂಲಕ ಗುಜರಾತ್‌ ಬಂದರಿನಿಂದ ಮಂಗಳೂರಿಗೆ ತರಿಸಲಾಗಿದೆ. ಒಟ್ಟು 16 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಈ ನೌಕೆ ಬುಧವಾರ ರಾತ್ರಿ ವೇಳೆಗೆ ಬಂದರು ತಲುಪಿದೆ.

ಶೀಘ್ರದಲ್ಲೇ ಮತ್ತೆರಡು ಕಚ್ಚಾತೈಲ ಹೊತ್ತ ಹಡಗುಗಳು ಮಂಗಳೂರಿಗೆ ಆಗಮಿಸಲಿದ್ದು, ಅವು ತಲುಪುವ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಎನ್‌ಎಂಪಿಎ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !