ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರಕ್ಷಣಾ ಸಚಿವಾಲಯವು ತುರ್ತಾಗಿ ಹಲವು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮುಂದಾಗಿದೆ. ತುರ್ತು ಸಂಗ್ರಹಣೆ ಅಥವಾ ಎಮರ್ಜೆನ್ಸಿ ಪ್ರೊಕ್ಯೂರ್ಮೆಂಟ್ ವ್ಯವಸ್ಥೆ ಅಡಿಯಲ್ಲಿ 13 ಒಪ್ಪಂದಗಳನ್ನು ಪೂರ್ಣಗೊಳಿಸಲಾಗಿದೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪೂರ್ಣವಾಗಿ ಅಣಿಗೊಳ್ಳುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ. ಈ 13 ಗುತ್ತಿಗೆಗಳ ಒಟ್ಟು ಮೌಲ್ಯವು 1,981.90 ಕೋಟಿ ರೂ ಆಗಿದೆ. ತುರ್ತು ಖರೀದಿಗಾಗೆಂದೇ ಬಜೆಟ್ನಲ್ಲಿ 2,000 ಕೋಟಿ ರೂ ಮೀಸಲಾಗಿರಿಸಲಾಗಿತ್ತು. ಬಹುತೇಕ ಎಲ್ಲಾ ಹಣವನ್ನೂ ವಿನಿಯೋಗಿಸಲಾಗಿದೆ.
ತುರ್ತಾಗಿ ಖರೀದಿಸಲಾಗುತ್ತಿರುವ ಶಸ್ತ್ರಾಗಳಲ್ಲಿ, ಡ್ರೋನ್ಗಳನ್ನು ಗುರುತಿಸಿ ಭೇದಿಸಬಲ್ಲಂತಹ ವಿವಿಧ ವ್ಯವಸ್ಥೆಗಳ ಏಕೀಕೃತ ಪ್ಲಾಟ್ಫಾರ್ಮ್ ಆದ ಐಡಿಡಿಐಎಸ್, ಹಗುರ ತೂಕದ ರಾಡಾರ್ (ಎಲ್ಎಲ್ಎಲ್ಆರ್), ಕಿರು ಶ್ರೇಣಿಯ ಏರ್ ಡಿಫೆನ್ಸ್ ಸಿಸ್ಟಂ ಇತ್ಯಾದಿ ಸೇರಿವೆ.
ಇಪಿ ವ್ಯವಸ್ಥೆಯಲ್ಲಿ ಖರೀದಿಸಲಾಗಿರುವ ಕೆಲ ಮಿಲಿಟರಿ ಉಪಕರಣಗಳು, ಇಂಟಿಗ್ರೇಟೆಡ್ ಡ್ರೋನ್ ಡಿಟೆಕ್ಷನ್ ಅಂಡ್ ಇಂಟರ್ಡಿಕ್ಷನ್ ಸಿಸ್ಟಂ (ಐಡಿಡಿಐಎಸ್), ಕೆಳ ಮಟ್ಟದ ಹಗರುತೂಕದ ರಾಡಾರ್ (ಎಲ್ಎಲ್ಎಲ್ಆರ್), ಬಹಳ ಕಿರು ಶ್ರೇಣಿಯ ಏರ್ ಡಿಫೆನ್ಸ್ ಸಿಸ್ಟಮ್ಸ್, ಲಾಂರ್ಸ್ ಮತ್ತು ಕ್ಷಿಪಣಿಗಳು,ದೂರ ನಿಯಂತ್ರದ ಏರಿಯಲ್ ವೆಹಿಕಲ್ (ಆರ್ಪಿಎವಿ), ಲಾಯ್ಟರಿಂಗ್ ಮ್ಯೂನಿಶನ್ಸ್, ವಿವಿಧ ರೀತಿಯ ಡ್ರೋನ್ಗಳು, ಗುಂಡು ನಿರೋಧಕ ಜ್ಯಾಕೆಟ್ಗಳು, ಬ್ಯಾಲಿಸ್ಟಿಕ್ ಹೆಲ್ಮೆಟ್, ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್ಸ್,ನೈಟ್ ಸೈಟ್ ರೈಫಲ್ಸ್ ಉಪಕರಣಗಳು ಖರೀದಿಸಲಾಗುತ್ತಿದೆ.