ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಬಂಕರ್-ಬಸ್ಟರ್ ಕ್ಷಿಪಣಿ (Bunker Buster Missile) ಯೋಜನೆಯನ್ನು ತೀವ್ರಗೊಳಿಸಿದ್ದು, ಈ ಮೂಲಕ ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ ಎಂದು ವರದಿಯಾಗಿದೆ.
ಭಾರತವು ಅಮೆರಿಕದ ‘ಬಂಕರ್ ಬಸ್ಟರ್’ ಬಾಂಬ್‌ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ ಅಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಅಗ್ನಿ-5 ಕ್ಷಿಪಣಿಯ ಹೊಸ, ವಾಯುಪಡೆಯ ಆವೃತ್ತಿಯಾಗಿದೆ. ಈ ಕ್ಷಿಪಣಿಯು ಪಾಕಿಸ್ತಾನ ಮತ್ತು ಚೀನಾದ ರಹಸ್ಯ ಭೂಗತ ಪರಮಾಣು ಬಂಕರ್‌ಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಮಾಡುವ ಸಾಮರ್ಥ್ಯ ಹೊಂದಿದೆ. ಈ ಬೆಳವಣಿಗೆಯು ಪ್ರತಿಸ್ಪರ್ಧಿ ರಾಷ್ಟ್ರಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇದೇ ಜೂನ್ 22 ರಂದು ಅಮೆರಿಕದ B2 ಸ್ಟೆಲ್ತ್ ಬಾಂಬರ್‌ಗಳು ಇರಾನ್‌ನ ಫೊರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಪರಮಾಣು ಕೇಂದ್ರಗಳ ಮೇಲೆ 30,000 ಪೌಂಡ್ ತೂಕದ GBU-57 ಮ್ಯಾಸಿವ್ ಆರ್ಡಿನೆನ್ಸ್ ಪೆನೆಟ್ರೇಟರ್ ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿದವು. ಈ ಬಂಕರ್-ಬಸ್ಟರ್ ಬಾಂಬ್‌ಗಳು 200 ಅಡಿ ಆಳದ ಭೂಗತ ರಚನೆಗಳನ್ನು ಭೇದಿಸಿ ಇಸ್ರೇಲ್‌ನ ನ್ಯೂಕ್ಲಿಯರ್ ಘಟಕಗಳನ್ನು ಧ್ವಂಸ ಮಾಡಿದ್ದವು.
ಈ ಘಟನೆಯಿಂದ ಪ್ರೇರಿತದ ಭಾರತವು ತನ್ನ ಭೂಗತ ಗುರಿಗಳನ್ನು ಭೇದಿಸುವ ಸಾಮರ್ಥ್ಯವಿರುವ ಕ್ಷಿಪಣಿಗಳ ಅಭಿವೃದ್ಧಿಯನ್ನು ಚುರುಕುಗೊಳಿಸಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಭಾರತವು ಈಗಾಗಲೇ SPICE-2000 ಮತ್ತು HAMMER ಕ್ಷಿಪಣಿಗಳಂತಹ ನಿಖರ ಗುರಿಯ ಶಸ್ತ್ರಾಸ್ತ್ರಗಳನ್ನು 2019ರ ಬಾಲಕೋಟ್ ದಾಳಿಯಲ್ಲಿ ಬಳಸಿದೆ, ಆದರೆ GBU-57 ರಂತಹ ದೊಡ್ಡ ಪ್ರಮಾಣದ ಬಂಕರ್-ಬಸ್ಟರ್ ಬಾಂಬ್‌ಗಳಿಗೆ ಸಮನಾದ ಶಸ್ತ್ರಾಸ್ತ್ರವನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ. ಈ ಹೊಸ ಕ್ಷಿಪಣಿ ಯೋಜನೆಯು ಭಾರತದ ರಕ್ಷಣಾ ಶಕ್ತಿಯನ್ನು ಆಧುನೀಕರಿಸುವ ಭಾಗವಾಗಿದೆ ಎಂದು ವರದಿಯಾಗಿದೆ.
ಈ ಯೋಜನೆಯು ಭಾರತದ ರಾಷ್ಟ್ರೀಯ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ರಕ್ಷಣಾ ತಜ್ಞರು ಭಾವಿಸಿದ್ದಾರೆ. ಈ ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸುಖೋಯ್-30 MKI ಮತ್ತು ರಫೇಲ್ ಯುದ್ಧ ವಿಮಾನಗಳಿಂದ ಉಡಾಯಿಸಬಹುದಾದಂತೆ ವಿನ್ಯಾಸಗೊಳಿಸಲಾಗುವ ಸಾಧ್ಯತೆಯಿದೆ.