ಮೇಷ
ಸಂಬಂಧದ ವಿಚಾರದಲ್ಲಿ ಚಿಂತೆಗೆ ಕಾರಣವಾಗುವ ಬೆಳವಣಿಗೆ. ಆಪ್ತರೊಡನೆ ತಾಳ್ಮೆಯಿಂದ ವ್ಯವಹರಿಸಿ. ಪ್ರಯಾಣದ ಯೋಜನೆ ಇದ್ದರೆ ಅಸ್ತವ್ಯಸ್ತ ಆಗಬಹುದು.
ವೃಷಭ
ಹಣದ ಸಮಸ್ಯೆ ಕಾಡಲಿದೆ. ಖರ್ಚುವೆಚ್ಚ ನಾಜೂಕಿನಿಂದ ನಿಭಾಯಿಸಿ. ಕೆಲವರ ನಯ ಮಾತಿಗೆ ಮರುಳಾಗಬೇಡಿ. ದೃಢ ನಿಲುವು ಅವಶ್ಯ.
ಮಿಥುನ
ಭವಿಷ್ಯದ ಕುರಿತು ಅತಿಯಾಗಿ ಚಿಂತೆ. ಇತ್ತೀಚಿನ ಬೆಳವಣಿಗೆ ಅದಕ್ಕೆ ಕಾರಣ. ಕೆಲದಿನಗಳಲ್ಲಿ ಆಶಾದಾಯಕ ಪರಿಸ್ಥಿತಿ ಮೂಡಲಿದೆ.
ಕಟಕ
ಹಣದ ವ್ಯವಹಾರ ಮಾಡುವಾಗ ಗೊಂದಲ ಸೃಷ್ಟಿಯಾದೀತು. ಎಚ್ಚರದಿಂದಿರಿ. ಕೌಟುಂಬಿಕ ವಿಷಯ ಇಂದು ಆದ್ಯತೆ ಪಡೆಯುವುದು.
ಸಿಂಹ
ಕೆಲಸದಲ್ಲಿ ಏಕಾಗ್ರತೆ ಮೂಡದು. ಮನೆ ಮತ್ತು ಕುಟುಂಬಸ್ಥರ ಕುರಿತೇ ಇಂದು ಸದಾ ಚಿಂತಿಸುವಿರಿ. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.
ಕನ್ಯಾ
ಅಹಂ ತ್ಯಜಿಸದಿದ್ದರೆ ಸಮಸ್ಯೆ ಎದುರಿಸುವಿರಿ. ಸಣ್ಣ ಹಿನ್ನಡೆಯನ್ನೂ ದೊಡ್ಡದಾಗಿ ಪರಿಗಣಿಸದಿರಿ. ಹೊಂದಾಣಿಕೆಯೂ ಬದುಕಲ್ಲಿ ಮುಖ್ಯ.
ತುಲಾ
ಆಪ್ತರಿಂದ ನಿಮ್ಮ ಕುರಿತಂತೆ ಮೃದು ಭಾವ ಅಪೇಕ್ಷಿಸುವಿರಿ. ಆದರೆ ಸೂಕ್ತ ಸ್ಪಂದನೆ ದೊರಕುವುದೆಂದು ಹೇಳಲಾಗದು. ಆರ್ಥಿಕ ಒತ್ತಡ ಹೆಚ್ಚು .
ವೃಶ್ಚಿಕ
ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದರೆ ಇಂದು ನಿಮಗೆ ಯಶ ಸಿಗುವುದು. ಹೊಸ ಅವಕಾಶ ತೋರಿ ಬರುವುದು. ಆರ್ಥಿಕ ಉನ್ನತಿ.
ಧನು
ನಿಮ್ಮ ಸುತ್ತಲಿನ ಪರಿಸ್ಥಿತಿ ನಿಮಗೆ ಅಸಮಾಧಾನ ಸೃಷ್ಟಿಸುವುದು. ಅದನ್ನು ಬದಲಿಸಲು ಯತ್ನಿಸುವಿರಿ. ಆದರೆ ನಿಮಗೆ ಆಂಶಿಕ ಯಶಸ್ಸು ಸಿಗುವುದು.
ಮಕರ
ವಸ್ತು ಖರೀದಿ, ಸಂತೋಷಾಚರಣೆ ಇಂದು ನಿಮ್ಮ ದಿನದ ಮುಖ್ಯ ಭಾಗವಾಗಲಿದೆ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಹರ್ಷದ ದಿನ.
ಕುಂಭ
ದೈಹಿಕ ಉದಾಸೀನತೆ ನಿಮ್ಮ ಮನಸ್ಸನ್ನು ಮಂಕುಗೊಳಿಸಲು ಅವಕಾಶ ಕೊಡದಿರಿ. ಮಾನಸಿಕವಾಗಿ ಉತ್ಸಾಹದಿಂದ ಇರುವುದು ಮುಖ್ಯ.
ಮೀನ
ಗ್ರಹಗತಿ ಇಂದು ಅಧಿಕ ಖರ್ಚು, ಅಸಹನೆ, ಅಸಹಕಾರ ಸೂಚಿಸುತ್ತಿವೆ. ಎಲ್ಲ ವಿಷಯದಲ್ಲೂ ತಾಳ್ಮೆಯಿಂದ ವ್ಯವಹರಿಸಬೇಕು.