ಮೇಷ
ಮನಸ್ಸಿಗೆ ನೆಮ್ಮದಿ ತರುವಂತಹ ಬೆಳವಣಿಗೆ. ಚಿಂತೆ ನಿವಾರಣೆ. ಆಪ್ತರ ಜತೆಗಿನ ವೈಮನಸ್ಸು ಪರಿಹಾರ. ಕೌಟುಂಬಿಕ ಸಹಕಾರ.
ವೃಷಭ
ಕುಟುಂಬಸ್ಥರ ಜತೆ ಸಮಯ ಕಳೆಯುವ ಅವಕಾಶ. ಸಣ್ಣಪುಟ್ಟ ಭಿನ್ನಮತ ಉಂಟಾದರೂ ಶೀಘ್ರ ಪರಿಹಾರ. ಆರ್ಥಿಕ ಉನ್ನತಿ, ಧನಪ್ರಾಪ್ತಿ.
ಮಿಥುನ
ವ್ಯವಹಾರದಲ್ಲಿ ಲಾಭ. ಖರ್ಚು ಮಾಡಲು ಯಾವುದೇ ಅಡ್ಡಿ ಇಲ್ಲ. ಕುಟುಂಬ ಸದಸ್ಯರಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ.
ಕಟಕ
ಇಂದು ತಾಳ್ಮೆ ಯಿಂದ ವರ್ತಿಸಿ. ಕಠಿಣ ಕೆಲಸವನ್ನೂ ಪೂರೈಸ ಬಲ್ಲಿರಿ. ಇತರರ ಪ್ರಭಾವಕ್ಕೆ ಸಿಲುಕದೆ ಸ್ವಂತ ನಿರ್ಧಾರ ತಾಳಿ.
ಸಿಂಹ
ವ್ಯವಹಾರದಲ್ಲಿ ಹಠಾತ್ ತಿರುವು. ಆರ್ಥಿಕ ಪರಿಸ್ಥಿತಿ ನಿಮಗೆ ಅನುಕೂಲಕರ ಆಗುವುದು. ಬಂಧು ಸಹಕಾರ.
ಕನ್ಯಾ
ಆತ್ಮಸಂತೃಪ್ತಿ ಮತ್ತು ಜನಪ್ರಿಯತೆ ಎರಡೂ ನಿಮಗಾಗುವುದು. ಕೆಲಸದಲ್ಲಿ ಬಯಸಿದ ಸಾಧನೆ ತೋರುವಿರಿ. ಎಲ್ಲರಿಂದ ಮೆಚ್ಚುಗೆ.
ತುಲಾ
ಮಹತ್ವದ ಉದ್ದೇಶವೊಂದು ಈಡೇರಲಿದೆ. ಆದರೂ ಈ ಕುರಿತು ಹೆಚ್ಚು ಚಿಂತಿಸಲಾರಿರಿ.
ವೃಶ್ಚಿಕ
ಮನೆಯಲ್ಲಿ ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಮಸ್ಯೆ ಎದುರಿಸುವಿರಿ. ಇದರಿಂದ ಇತರರ ಟೀಕೆಗೆ ಗುರಿಯಾಗುವಿರಿ.
ಧನು
ನಿಮ್ಮ ತಾಳ್ಮೆ ಕೆಡಿಸುವ ಪ್ರಸಂಗ. ಕೆಲವು ವಿಚಾರಗಳಲ್ಲಿ ನಿಮ್ಮ ಭಾವನೆಗೆ ಇತರರು ಬೆಲೆ ಕೊಡುವುದಿಲ್ಲ.ಸಹನೆಯಿರಲಿ.
ಮಕರ
ನಿಮಗೆ ಸಂಬಂಧಿಸಿದ ವಿಷಯವೊಂದು ದ್ವಂದ್ವ ಹುಟ್ಟಿಸುವುದು. ಯಾವ ದಾರಿ ಹಿಡಿಯಬೇಕೆಂದು ಅರಿಯದೆ ಗೊಂದಲ.
ಕುಂಭ
ಕೆಲ ವಿಷಯಗಳಲ್ಲಿ ತಕ್ಷಣದ ನಿರ್ಧಾರ ತಾಳಲು ಮನಸ್ಸನ್ನು ಸಿದ್ಧ ಪಡಿಸಬೇಕು. ಇಂದು ಅಂತಹ ಪ್ರಸಂಗ ಉಂಟಾದೀತು.
ಮೀನ
ಭಾವನಾತ್ಮಕ ಏರುಪೇರು. ಪ್ರತಿ ವಿಷಯಕ್ಕೂ ಅತಿರೇಕವಾಗಿ ಸ್ಪಂದಿಸುವಿರಿ. ಮನಸ್ಸು ಗೊಂದಲದ ಗೂಡು. ಆರ್ಥಿಕ ಉನ್ನತಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ