ದಿನಭವಿಷ್ಯ; ಸಂಗಾತಿಯ ಜೊತೆ ಕಲಹ ಸಾಧ್ಯತೆ ಎಚ್ಚರ!

ಮೇಷ
ಈ ದಿನವನ್ನು ವಿರಾಮದಿಂದ ಕಳೆಯ ಬಯಸಿದರೂ ಕೆಲವು ಚಿಂತೆ, ಉದ್ವಿಗ್ನತೆ ಬಾಧಿಸುತ್ತದೆ. ಮನೆಯಲ್ಲಿ ಮನಸ್ತಾಪ, ವಾಗ್ವಾದ ಉಂಟಾದೀತು.

ವೃಷಭ
ಮನೆಯಲ್ಲಿ ಸಂಬಂಧ ಸುಧಾರಣೆಗೆ ಒತ್ತು ಕೊಡಿ. ಈ ವಿಷಯದಲ್ಲಿ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲು ತಯಾರಾಗಿರಿ. ಒಟ್ಟಿನಲ್ಲಿ ನೆಮ್ಮದಿ ಮುಖ್ಯ!

ಮಿಥುನ
ಮಾನಸಿಕ ಒತ್ತಡ ಹೆಚ್ಚಿಸುವ ಕಾರ್ಯಕ್ಕೆ ಕೈ ಹಾಕಬೇಡಿ. ಸಂಗಾತಿಯಿಂದ ಸಂತೋಷದ ಸುದ್ದಿ.  ಆರ್ಥಿಕ ಉನ್ನತಿ. ವಿದ್ಯಾರ್ಥಿಗಳಿಗೆ ಯಶ.

ಕಟಕ
ಹೆಚ್ಚುವರಿ ಕೆಲಸದ ಹೊಣೆ. ಇದರಿಂದ ಈ ದಿನದ ನಿಮ್ಮ ಯೋಜನೆ  ಏರುಪೇರು. ಒತ್ತಡದ ಮದ್ಯೆಯೂ ಆತ್ಮೀಯರ ಜತೆ  ಕಳೆಯಲು ಸಮಯ ವಿನಿಯೋಗಿಸಿ.

ಸಿಂಹ
ಕೌಟುಂಬಿಕ ಸಮ್ಮಿಲನ. ಕೆಲಸ ಸುಗಮ. ಹೊಸ ವ್ಯವಹಾರದಲ್ಲಿ ಹಣ ಹೂಡುವ ಮುನ್ನ ಎಚ್ಚರ ವಹಿಸಿರಿ. ಅದರಿಂದ ಹೆಚ್ಚಿನ ಲಾಭವಾಗದು. ಆರೋಗ್ಯ ಸುಸ್ಥಿರ.

ಕನ್ಯಾ
ಹಣದ ವ್ಯವಹಾರದಲ್ಲಿ ಗೊಂದಲ ಸಂಭವ. ಸ್ಪಷ್ಟ ಚಿಂತನೆಯೊಂದಿಗೆ ಮುಂದೆ ಹೆಜ್ಜೆಯಿಡಿ. ವಿವಾಹಿತರಿಗೆ ಹರ್ಷದ ಬೆಳವಣಿಗೆ. ಕೌಟುಂಬಿಕ ಶಾಂತಿ, ಸಮಾಧಾನ.

ತುಲಾ
ಕೌಟುಂಬಿಕ ಪರಿಸರವು ನೆಮ್ಮದಿ ನೀಡುವುದು. ಇದು ನಿಮ್ಮ ವೃತ್ತಿ ಬದುಕಿಗೂ ಉತ್ಸಾಹ ತುಂಬಲಿದೆ. ಹಣದ ವಿಚಾರದಲ್ಲಿಂದು ಚಿಂತೆ ಪಡುವ ಅಗತ್ಯವಿಲ್ಲ.

ವೃಶ್ಚಿಕ
ಏಕತಾನತೆಯ ಬದುಕಿನಲ್ಲಿ ಬದಲಾವಣೆ ಉಂಟಾದರೆ ಅದನ್ನು ಸ್ವಾಗತಿಸಿ. ಅದರಿಂದ ಆತಂಕ ಪಡುವುದು ಅನವಶ್ಯ. ಆತ್ಮೀಯರ ಸಹಕಾರ ನಿಮಗಿದೆ.

ಧನು
ಕುಟುಂಬ ಸದಸ್ಯರು ಸಲಹೆ ನೀಡಿದರೆ ಅದಕ್ಕೆ ಕಿವಿಗೊಡಿ. ವಿವೇಚಿಸದೆ ತಿರಸ್ಕರಿಸಬೇಡಿ. ನೆರೆಕರೆಯವರ ಜತೆ ಸಣ್ಣ ವಿಷಯಕ್ಕೆ ಜಗಳ ಕಾಯಲು ಹೋಗದಿರಿ.

ಮಕರ
ಕಾರ್ಯಕ್ಕೆ ಅಡ್ಡಿಗಳು. ಇದರಿಂದ ನಿಮ್ಮ ಯೋಜನೆಗೆ ಹಿನ್ನಡೆ. ಕೌಟುಂಬಿಕ ಪರಿಸರ ನೆಮ್ಮದಿ ತರುವುದು. ಹಿತಮಿತಾಹಾರ ಆರೋಗ್ಯಕ್ಕೆ ಒಳ್ಳೆಯದು.

ಕುಂಭ
ಆರ್ಥಿಕವಾಗಿ ಒಳ್ಳೆಯ ದಿನ. ಧನಲಾಭ, ಖರ್ಚು ಕಡಿಮೆ. ಆಸ್ತಿ ಖರೀದಿ ವ್ಯವಹಾರ ಬೇಡ, ಅದು ದೀರ್ಘಾವಧಿಯಲ್ಲಿ  ನಷ್ಟ ತರಬಹುದು.

ಮೀನ
ಕುಟುಂಬ ಸದಸ್ಯರ ಜತೆ ಸೌಹಾರ್ದದಿಂದ ನಡಕೊಳ್ಳಿ. ಅವರ ಬೇಕುಬೇಡಗಳಿಗೆ ಸ್ಪಂದಿಸಿ. ರೋಷಾವೇಶ, ತಿರಸ್ಕಾರ ಬಂಧುತ್ವ ಕೆಡಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!