ದಿನಭವಿಷ್ಯ: ಮಾನಸಿಕವಾಗಿ ದೃಢರಾದರೂ, ಆತ್ಮಸ್ಥೈರ್ಯ ರೂಢಿಸಿಕೊಳ್ಳಿ

ಮೇಷ
ಅತಿಥಿಗಳು ಅನಿರೀಕ್ಷಿತ ಭೇಟಿ ನೀಡಿಯಾರು. ಆರ್ಥಿಕ ಗುರಿ ಸಾಧಿಸಲು ಸರಿಯಾಗಿ ಗಮನ ಕೊಡಿ. ಇತರರು ನೆರವು ನೀಡುವರೆಂಬ ಭ್ರಮೆ ಬಿಟ್ಟುಬಿಡಿ.

ವೃಷಭ
ನಿಮಗೆ ಅನಿರೀಕ್ಷಿತ ಎನ್ನಬಹುದಾದ ಪ್ರಸಂಗ ಉಂಟಾದೀತು. ಅದನ್ನು ದೃಢತೆಯಿಂದ ಎದುರಿಸಿ. ಬಂಧುಗಳ ಅಸಹಕಾರ. ಕಾರ್ಯದಲ್ಲಿ ವಿಳಂಬ.

ಮಿಥುನ
ನಿಮ್ಮಲ್ಲಿ  ಮಾಡುವ ಸಣ್ಣ ಬದಲಾವಣೆ ದೊಡ್ಡ ಪರಿವರ್ತನೆಗೆ  ಕಾರಣವಾಗುವುದು. ಖಾಸಗಿ ಬದುಕಿನಲ್ಲಿ ಹೆಚ್ಚು ಸಂತೋಷ, ಕೌಟುಂಬಿಕ ನೆಮ್ಮದಿ.

ಕಟಕ
ಸಾಂಸಾರಿಕ ಬದುಕಿನಲ್ಲಿ  ಬಿಕ್ಕಟ್ಟು ಉಂಟಾದೀತು. ಕೆಲವರ ಮಾತುಗಳಿಗೆ ಅತಿರೇಕದ ಪ್ರತಿಕ್ರಿಯೆ ತೋರದಿರಿ. ಎಲ್ಲವನ್ನು ಕ್ರೀಡಾಸ್ಫೂರ್ತಿಯಿಂದ  ಸ್ವೀಕರಿಸಿರಿ.

ಸಿಂಹ
ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಮಾನಸಿಕವಾಗಿ ನಿರಾಳತೆ ದೊರಕಲಿದೆ. ಕೆಲವರ ವರ್ತನೆಯನ್ನು ತಪ್ಪಾಗಿ ಭಾವಿಸುವ ಸಂದರ್ಭ ಒದಗಬಹುದು.

ಕನ್ಯಾ
ಕೆಲ ವಿಚಾರ ಮನಸ್ಸನ್ನು ಕೊರೆಯುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಫಲಿಸದು. ಪರಿಸ್ಥಿತಿಗೆ ಹೊಂದಿಕೊಂಡು ನಡೆಯಿರಿ.

ತುಲಾ
ಸಂಬಂಧಗಳನ್ನು ನೀವೇ ನಿಯಂತ್ರಿಸಲು ಹೋಗದಿರಿ. ನಿಮ್ಮ ಪರಿಸ್ಥಿತಿಯನ್ನು ಪರಾಮರ್ಶಿಸಿ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಿ.

ವೃಶ್ಚಿಕ
ಆತ್ಮೀಯ ಬಂಧುಗಳ ಜತೆ ವ್ಯವಹರಿಸುವಾಗ ಗೊಂದಲಕ್ಕೆ ಆಸ್ಪದ ಕೊಡದಿರಿ. ನಿಮ್ಮ ನಿಲುವು ಸ್ಪಷ್ಟವಾಗಿರಲಿ. ವಾಗ್ವಾದಗಳಿಂದ ದೂರವಿರಿ.

ಧನು
ಕೌಟುಂಬಿಕ ವಿಷಯದಲ್ಲಿ ಜವಾಬ್ದಾರಿ ಹೆಚ್ಚಳ. ಇತರರ ಸಹಕಾರ ನಿಮಗೆ ದೊರಕದು. ಸಣ್ಣ ವಿಷಯವೂ ನಿಮ್ಮ ತಾಳ್ಮೆ ಕದಡಬಹುದು. ಅಸಹನೆ ಹೆಚ್ಚುವುದು.

ಮಕರ
ಪರಸ್ಪರ ವಿರುದ್ಧವಾದ ಭಾವನೆಗಳ ತಾಕಲಾಟ. ಹೊಣೆಗಾರಿಕೆ ಹೆಚ್ಚಳ. ಅದನ್ನೆಲ್ಲ ಸಮಾಧಾನದಿಂದ ನಿಭಾಯಿಸಿ. ಹಿತಮಿತ ಆಹಾರ ಸೇವಿಸಿರಿ.

ಕುಂಭ
ಬಂಧುಗಳಿಂದ ನಿಮಗೆ ಪೂರಕವಾದ ಸುದ್ದಿ ಕೇಳುವಿರಿ. ನಿಮ್ಮ ಬೇಸರ ಹೆಚ್ಚಬಹುದು. ಸಮಸ್ಯೆ ಇನ್ನೂ ಮುಗಿಯುತ್ತಿಲ್ಲ ಎಂಬ ಹತಾಶ ಭಾವನೆ ಕಾಡಬಹುದು.

ಮೀನ
ಇತರರು ನಿಮ್ಮಿಂದ ಬಹಳಷ್ಟು ನಿರೀಕ್ಷಿಸಬಹುದು. ಅವರ ಬೇಡಿಕೆ ಈಡೇರಿಸಲು ಕಷ್ಟ ಪಡುವಿರಿ. ಚರ್ಮದ ಅಲರ್ಜಿ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!