ದಿನಭವಿಷ್ಯ: ದಿಢೀರ್ ಹಣ ಬರುವ ಸಾಧ್ಯತೆ, ಆಸ್ತಿ ವಿಚಾರಗಳು ಇತ್ಯರ್ಥವಾಗಲಿವೆ

ಮೇಷ
ನಿಮ್ಮನ್ನು ಆಟವಾಡಿಸಲು ಬಯಸುವವರಿಗೆ ತಿರುಗೇಟು ನೀಡಲು ತಯಾರಾಗಿ. ಆದರೆ ಅದು ರಾಜತಾಂತ್ರಿಕ ನಡೆಯಾಗಿರಲಿ, ಕೋಪಾವೇಶ ಬೇಡ.

ವೃಷಭ
ನಿಮಗಿಂದು ಮಹತ್ವದ ದಿನ. ಕೌಟುಂಬಿಕ ವಿಷಯ, ಆಸ್ತಿಪಾಸ್ತಿಯ ವಿಷಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಇವು ಕಿರಿಕಿರಿ ಸೃಷ್ಟಿಸಲು ಅವಕಾಶ ಕೊಡಬೇಡಿ.

ಮಿಥುನ
ಮನಸ್ಸು ಇಂದು ಗೊಂದಲದ ಗೂಡು. ಅದು ನಿಮ್ಮ ದೈನಂದಿನ ವ್ಯವಹಾರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ನಿಜವಾಗಿ ಚಿಂತೆಗೆ ಕಾರಣವಿಲ್ಲ.

ಕಟಕ
ಹಣದ ಸಮಸ್ಯೆ ಕಾಡಬಹುದು. ಅದಕ್ಕೆ ಉತ್ತರ ಅನ್ಯರಿಂದ ಸಾಲ ಪಡೆಯುವುದಲ್ಲ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಿ.

ಸಿಂಹ
ಆಪ್ತರ ಜತೆ ಭಿನ್ನಾಭಿಪ್ರಾಯ. ಅದನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಿ. ಅದಕ್ಕಾಗಿ ನಿಮ್ಮ ಸಂತೋಷ ತ್ಯಾಗ ಮಾಡಬೇಕಾದೀತು.

ಕನ್ಯಾ
ಅತಿ ಹೆಚ್ಚು ಭಾವುಕರಾಗಿ ಇಂದು ವರ್ತಿಸುವಿರಿ. ವಿವೇಕಕ್ಕೆ ಹೆಚ್ಚು  ಗಮನ ಕೊಡಿ. ಕೆಲಸದಲ್ಲಿ ಬಡ್ತಿ ನಿರೀಕ್ಷಿಸಿದ್ದರೆ ಪೂರಕ ಬೆಳವಣಿಗೆ ಸಂಭವಿಸೀತು.

ತುಲಾ
ಕೌಟುಂಬಿಕ ಸಮಸ್ಯೆ ಕಾಡುವುದು. ಆದರೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ. ಅದು ತಾತ್ಕಾಲಿಕ ಸ್ಥಿತಿಯಷ್ಟೆ. ಆಪ್ತರನ್ನು ಎದುರು ಹಾಕಿಕೊಳ್ಳದಿರಿ.

ವೃಶ್ಚಿಕ
ಸಮಸ್ಯೆ ಎದುರಿಸುವಿರಿ. ಅದನ್ನು ನಾಜೂಕಿನಿಂದ  ನಿಭಾಯಿಸಲು ಸಿದ್ಧರಾಗಿ. ಕಠಿಣ ಕ್ರಮವು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಸಹನೆ ಅವಶ್ಯ.

ಧನು
ಕೆಲಸವನ್ನು ಮರುದಿನಕ್ಕೆ ಮುಂದೂಡದಿರಿ. ಇಂದೇ ಮುಗಿಸಲು ಯತ್ನಿಸಿ. ನಿರಾಶಾವಾದ ಬಿಡಿ. ದೀರ್ಘಾವಧಿಯಲ್ಲಿ ನಿಮಗೆ ಒಳಿತೇ ಆಗಲಿದೆ.

ಮಕರ
ನೀವಿರುವಲ್ಲೆಲ್ಲ ಇಂದು ಉತ್ಸಾಹ, ಸಂತೋಷದ ವಾತಾವರಣ. ಅದಕ್ಕೆ ಕಾರಣ ನಿಮಗೆ ಪೂರಕವಾದ ಗ್ರಹಗತಿ. ಎಲ್ಲೆಡೆ ನಿಮಗೆ ಉತ್ತಮ ಸಹಕಾರ ಲಭ್ಯ.

ಕುಂಭ
ಜನರೊಂದಿಗೆ ಸಂವಹನ ಇಂದು ನಿಮಗೆ ಕಷ್ಟವಾದೀತು. ಅನ್ಯರ ಅಭಿಪ್ರಾಯ  ಒಪ್ಪಲು ನೀವು ತಯಾರಿಲ್ಲ. ಮನದಲ್ಲಿ ಅಭದ್ರತೆ ಭಾವ ಕಾಡುವುದು.

ಮೀನ
ಸಮಸ್ಯೆಯೊಂದು ನಿವಾರಣೆ. ಅದರಿಂದ ಮನಸ್ಸಿಗೆ ನಿರಾಳತೆ.ಮನೆಯಲ್ಲಿ ಹಿರಿಯರ ಆರೋಗ್ಯ ಸ್ಥಿತಿ ಸುಧಾರಣೆ. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!