ಮೇಷ
ಇತ್ತೀಚಿನ ಕೆಲವು ಘಟನೆಗಳು ನಿಮ್ಮ ವರ್ತನೆಯಲ್ಲಿ ಬದಲಾವಣೆ ತಂದೀತು. ಅದು ಬದುಕಿನ ಮೇಲೆ ಪರಿಣಾಮ ಬೀರದಿರಲಿ.
ವೃಷಭ
ಎಲ್ಲರನ್ನು ಕುರುಡಾಗಿ ನಂಬಬೇಡಿ. ಯಾವುದೋ ವಿಷಯ ಚಿಂತೆಗೆ ಕಾರಣವಾಗುತ್ತದೆ. ಪ್ರೀತಿಯ ನಿವೇದನೆ ಫಲ ನೀಡದು.
ಮಿಥುನ
ನಿಮ್ಮ ಕನಸೆಲ್ಲವೂ ಒಂದೇ ಬಾರಿ ಈಡೇರದು ಎಂಬ ಅರಿವು ನಿಮಗಿರಲಿ. ಕಾಯುವ ತಾಳ್ಮೆ ನಿಮಗಿರಬೇಕು. ಆರೋಗ್ಯ ಸ್ಥಿರ.
ಕಟಕ
ಬಿರುಸಿನ ವರ್ತನೆ ತೋರುವಿರಿ. ಇದೇ ವೇಳೆ ಪ್ರಮುಖ ವಿಷಯದಲ್ಲಿ ನಿಷ್ಕ್ರಿಯತೆ ಪ್ರದರ್ಶಿಸುವಿರಿ. ಇದು ಪ್ರತಿಕೂಲ ಸನ್ನಿವೇಶ ಸೃಷ್ಟಿಸಬಹುದು.
ಸಿಂಹ
ಕೆಲವು ವಿಷಯಗಳಿಗೆ ನೀವು ಆದ್ಯ ಗಮನ ಕೊಡಬೇಕು. ಅದನ್ನು ನಿರ್ಲಕ್ಷಿಸಬೇಡಿ. ಕೆಲಸದ ನಡುವೆ ಕುಟುಂಬ ಸದಸ್ಯರ ಹಿತಾಸಕ್ತಿಗೂ ಗಮನಕೊಡಿ.
ಕನ್ಯಾ
ನಿಮ್ಮಲ್ಲಿರುವ ಉತ್ತಮ ಕ್ರಿಯಾಶೀಲತೆಯನ್ನು ಸರಿಯಾಗಿ ಬಳಸಿಕೊಳ್ಳಿ. ಇಂದು ಸಮಸ್ಯೆಗಳಿಲ್ಲದ ನಿರಾಳ ದಿನ. ಕುಟುಂಬಸ್ಥರ ಸಹಕಾರ.
ತುಲಾ
ಇತರರ ಒಳ್ಳೆ ಕೆಲಸಕ್ಕೆ ಮೆಚ್ಚಿಕೊಳ್ಳಿ. ಅವರಿಂದ ಮುಂದಕ್ಕೆ ನಿಮಗೂ ಸಹಾಯವಾಗಲಿದೆ. ಸಾಂಸಾರಿಕ ಸಮಸ್ಯೆ ಬಗ್ಗೆ ಅತಿ ಚಿಂತೆ ಬೇಡ.
ವೃಶ್ಚಿಕ
ಕೆಲ ಕಾರಣಗಳಿಂದ ನೀವಿಂದು ಭಾವುಕರಾಗಿ ವರ್ತಿಸುವಿರಿ. ಕೋಪವನ್ನು ನಿಯಂತ್ರಿಸಿ. ಕೌಟುಂಬಿಕ ವಿಷಯದಲ್ಲಿ ಆತುರದ ನಿರ್ಣಯ ತಾಳದಿರಿ.
ಧನು
ಬದುಕಿನ ಕುರಿತು ಸರಿಯಾದ ನಿರ್ಧಾರ ತಾಳಬೇಕಾದವರು ನೀವೆ. ಇತರರನ್ನು ಅತಿಯಾಗಿ ಅವಲಂಬಿಸಬೇಡಿ.ಆರ್ಥಿಕ ಸುಧಾರಣೆ.
ಮಕರ
ನೀವಿಂದು ಭಾವುಕರಾಗಿ ವರ್ತಿಸು ವಿರಿ. ಆದರೆ ಇದರಿಂದ ನಿಮಗೆ ಒಳ್ಳೆಯದಾಗಲಿದೆ.ಆತ್ಮೀಯ ಸಂಬಂಧ ಗಾಢ
ವಾಗಲಿದೆ. ಧನ ಲಾಭ.
ಕುಂಭ
ಗೊಂದಲಭರಿತ ಮನಸ್ಸು. ಸಮಸ್ಯೆಗಳು ಹೆಚ್ಚಿವೆ ಎಂಬ ದುಗುಡ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ಆರೋಗ್ಯದತ್ತ ಗಮನಕೊಡಿ.
ಮೀನ
ಫಲಪ್ರದ ದಿವಸ. ಯಾವುದೋ ಕಾರ್ಯ ಸಾಧಿಸಲು ಯೋಜಿಸಿದ್ದರೆ ಇಂದು ಕಾರ್ಯಗತ. ಸಾಂಸಾರಿಕ ಸಮಸ್ಯೆ ಪರಿಹಾರ ಕಾಣುವುದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ