ಮೇಷ
ವೃತ್ತಿಯಲ್ಲಿ ಫಲಪ್ರದ ಬೆಳವಣಿಗೆ. ಹಣದ ಕೊರತೆ ಕಾಡದು. ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆಯಾಗುವ ಪ್ರಸಂಗ. ಹೊಟ್ಟೆ ಕೆಡುವ ಸಾಧ್ಯತೆ.
ವೃಷಭ
ವೃತ್ತಿಯಲ್ಲಿ ಹೆಚ್ಚು ಹೊಣೆ. ದೂರ ಪ್ರಯಾಣ ಸಂಭವ. ಸಂಬಂಧದಲ್ಲಿ ಅಹಂಕಾರ ಸಲ್ಲದು. ವಿನಯದಿಂದ ವ್ಯವಹರಿಸಿ. ಆರ್ಥಿಕ ಉನ್ನತಿ.
ಮಿಥುನ
ಉದ್ಯೋಗದಲ್ಲಿ ಯಶಸ್ಸು. ನಿಮ್ಮ ಆವಶ್ಯಕತೆ ಪೂರೈಸಲಿದೆ. ಆರ್ಥಿಕ ಕೊರತೆ ನೀಗುವುದು. ಬಂಧುಗಳ ಸಹಕಾರದಿಂದ ಕಾರ್ಯ ಸುಗಮ.
ಕಟಕ
ಹಿರಿಯರಿಂದ ಅನಿರೀಕ್ಷಿತ ಲಾಭ ಪಡೆಯುವಿರಿ. ಬಂಧುತ್ವ ವೃದ್ಧಿ. ಭಿನ್ನಮತ ನಿವಾರಣೆ. ಸ್ವಾಸ್ಥ್ಯ ಕುರಿತ ಚಿಂತೆಯು ಪರಿಹಾರ.
ಸಿಂಹ
ಟೀಕೆಗಳು ಬರದ ರೀತಿ ಕಾರ್ಯವೆಸಗಿ. ಸ್ನೇಹತರು ಹೆಚ್ಚಿದಂತೆ ವಿರೋಧಗಳೂ ಹೆಚ್ಚುವರು. ಸಮಚಿತ್ತ ದಿಂದ ಸ್ವೀಕರಿಸಿ.
ಕನ್ಯಾ
ಎಂದಿಗಿಂತ ಹೆಚ್ಚು ಕಾರ್ಯ. ಇತರರ ಬೇಡಿಕೆ ಈಡೇರಿಸಲು ಹೆಚ್ಚು ಗಮನ ಕೊಡಬೇಕಾಗಿದೆ.ವೃತ್ತಿಯಲ್ಲಿ ಪೈಪೋಟಿ ಹೆಚ್ಚಲಿದೆ.
ತುಲಾ
ಈ ದಿನ ನಿಮಗೆ ಮಿಶ್ರಫಲ. ಖಾಸಗಿ ಬದುಕಿನಲ್ಲಿ ನೆಮ್ಮದಿ. ಸಮಸ್ಯೆ ಪರಿಹಾರ. ಆದರೆ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಲಿದೆ. ಧನವ್ಯಯ.
ವೃಶ್ಚಿಕ
ಸಹೋದ್ಯೋಗಿ ಜತೆ ಸರಿಬರದು. ವಾಗ್ವಾದ ನಡೆದೀತು. ಆತ್ಮೀಯ ಸಂಬಂಧ ಕೆಡುವಂತಹ ನಡೆನುಡಿ ತೋರಬೇಡಿ. ಹೊಂದಾಣಿಕೆ ಮುಖ್ಯ.
ಧನು
ವೃತ್ತಿ ಒತ್ತಡ ಜಾಣ್ಮೆಯಿಂದ ನಿಭಾಯಿಸಿ. ಯೋಜನೆ ಮುಖ್ಯ. ಸಂಗಾತಿ ಜತೆ ಭಿನ್ನಮತ. ಹೆಚ್ಚು ಖರ್ಚು. ಉಳಿತಾಯ ಕಡಿಮೆ.
ಮಕರ
ಎಲ್ಲ ದಿಸೆಯಲ್ಲೂ ಪ್ರಗತಿ ಕಾಣುವಿರಿ. ಸಂಬಂಧದಲ್ಲಿ ಸೌಹಾರ್ದ. ಹೊಸ ಹೂಡಿಕೆ ಲಾಭ ತರಲಿದೆ. ಆರೋಗ್ಯ ಸುಸ್ಥಿತಿ, ನಿರಾಳತೆ.
ಕುಂಭ
ಕಾಲಮಿತಿಯಲ್ಲಿ ಕೆಲಸ ಪೂರ್ತಿಯಾಗದು. ಸಹನೆ ಕೆಡುವ ಪ್ರಸಂಗ ಉದ್ಭವಿಸಬಹುದು. ಭಾವನಾತ್ಮಕ ಏರುಪೇರು ಉಂಟಾಗಲಿದೆ.
ಮೀನ
ಇಂದು ಕಠಿಣ ಕೆಲಸ ಕಾದಿದೆ. ಸುಗಮವಾಗಿ ಸಾಗದು. ಮುಕ್ತ ಸಂವಹನ ಅವಶ್ಯ. ಬಿಗು ನಿಲುವು ಬಿಡಿ. ನಿರ್ಲಕ್ಷದಿಂದ ಧನಹಾನಿ ಸಂಭವ.



