ಮೇಷ
ಪ್ರೀತಿಯ ವಿಚಾರ ದಲ್ಲಿ ಉಂಟಾಗಿದ್ದ ಬಿಕ್ಕಟ್ಟು ನಿವಾರಣೆ. ಬಂಧುಗಳ ಸಹಕಾರ. ಹಣಕಾಸು ಪರಿಸ್ಥಿತಿ ಸಂಕಷ್ಟ ತಂದೊಡ್ಡಬಹುದು.
ವೃಷಭ
ಯಶಸ್ವೀ ದಿನ. ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಪೂರಕ ಬೆಳವಣಿಗೆ. ಮಾನಸಿಕ ತುಮುಲ ನಿವಾರಣೆ. ಕೌಟುಂಬಿಕ ಸೌಹಾರ್ದ.
ಮಿಥುನ
ಪ್ರತಿಸ್ಪರ್ಧಿಗಳಿಂದ ನಿಮ್ಮ ಕುರಿತಂತೆ ಅಪಪ್ರಚಾರ. ಕೆಲಸಕ್ಕೆ ವಿಘ್ನ. ವ್ಯವಹಾರದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಆರ್ಥಿಕ ಒತ್ತಡ.
ಕಟಕ
ವ್ಯವಹಾರದ ಒತ್ತಡ ನಿವಾರಣೆ. ಸುಲಲಿತ ಕಾರ್ಯ. ವ್ಯಕ್ತಿಯೊಬ್ಬರ ಶ್ಲಾಘನೆ ನಿಮಗೆ ಹರ್ಷ ತರುವುದು. ಕೌಟುಂಬಿಕ ಮನಸ್ತಾಪ ಅಂತ್ಯ.
ಸಿಂಹ
ಬಿಕ್ಕಟ್ಟಿನ ಪರಿಸ್ಥಿತಿ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಭಿನ್ನ ದಾರಿ ಹುಡುಕಬೇಕು. ಸೂಕ್ತ ನೆರವೂ ಪಡೆದುಕೊಳ್ಳಿ. ಆರ್ಥಿಕ ಅಡಚಣೆ.
ಕನ್ಯಾ
ನಿಮಗಿಂದು ಯಶಸ್ಸು ಕಾದಿದೆ. ಹಾಗಾಗಿ ಈ ದಿನವನ್ನು ಸದುಪಯೋಗ ಮಾಡಿ ಕೊಳ್ಳಿ. ಪೂರೈಸ ಬೇಕಾದ ವ್ಯವಹಾರ ಮುಗಿಸಿಕೊಳ್ಳಿ.
ತುಲಾ
ಸಣ್ಣಪುಟ್ಟ ಹಿನ್ನಡೆಗಳಿಗೆ ಬಾಗದೆ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ. ಖಂಡಿತಾ ನಿಮಗೆ ಯಶ ಸಿಗುವುದು. ಕೌಟುಂಬಿಕ ಸಮಾಧಾನ.
ವೃಶ್ಚಿಕ
ಒತ್ತಡಗಳಿಂದ ಪಾರಾಗಲು ದಾರಿ ಹುಡುಕುವಿರಿ. ಆದರೆ ಅವಕಾಶ ದೊರಕದು. ಮತ್ತದೇ ದಿನವಹಿ ಕಾರ್ಯದ ಜಂಜಾಟ.
ಧನು
ಆಪ್ತರೊಂದಿಗೆ ದಿನ ಕಳೆಯುವ ಅವಕಾಶ. ವೃತ್ತಿ ಕಾರ್ಯಗಳಿಂದು ಹಿನ್ನೆಲೆಗೆ ಸರಿಯುತ್ತವೆ. ಆರ್ಥಿಕ ಮುಗ್ಗಟ್ಟು ನಿವಾರಣೆ, ಆರ್ಥಿಕ ಸಹಾಯ.
ಮಕರ
ವೃತ್ತಿಯಲ್ಲಿ ಮೇಲೇರಲು ನಿಮಗೆ ಆಪ್ತರ ಸಹಾಯ ಒದಗು ವುದು. ಸಣ್ಣ ಕ್ಲೇಶಗಳು ಬಾಧಿಸಿದರೂ ಅಪರಾಹ್ನದ ಬಳಿಕ ನಿವಾರಣೆ.
ಕುಂಭ
ಮೂಲತಃ ಸಮಾಧಾನಿಯಾದ ನೀವು ಇಂದು ಕೋಪದಿಂದ ಸಿಡಿಯುವ ಪ್ರಸಂಗ ಉದ್ಭವಿಸೀತು. ಪರಿಸ್ಥಿತಿ ಹದ ಮೀರದಿರಲಿ.
ಮೀನ
ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ. ಆ ಮೂಲಕ ನೀವು ಸಂತೋಷ ಪಡೆಯಬಲ್ಲಿರಿ. ಕಾಡುತ್ತಿರುವ ಕೊರಗನ್ನು ನಿರ್ಲಕ್ಷಿಸಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ