ಮೇಷ
ಇಂದು ನಿಮಗೆ ಕೆಲಸ ಹೆಚ್ಚು. ವಿರಾಮವಾಗಿ ದಿನ ಕಳೆಯಲು ಸಮಯ ಸಿಗಲಾರದು. ಕೆಲವರ ವರ್ತನೆ ಅಸಹನೀಯ ಅನಿಸಬಹುದು.
ವೃಷಭ
ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಉದ್ಯೋಗ ಕ್ಷೇತ್ರದಲ್ಲಿ ತೃಪ್ತಿಕರ ಬೆಳವಣಿಗೆ. ಹಿರಿಯರು ತಮ್ಮ ಆಹಾರದ ವಿಷಯದಲ್ಲಿ ಎಚ್ಚರ ವಹಿಸಬೇಕು.
ಮಿಥುನ
ಸವಾಲಿನ ದಿನ. ಕೆಲವಾರು ವಿಷಯ ನಿಮ್ಮ ಮನಶ್ಯಾಂತಿ ಕದಡುತ್ತದೆ. ವಾಗ್ವಾದ ನಡೆದೀತು. ಅತಿಯಾದ ಚಿಂತೆಯಿಂದ ತಲೆಬೇನೆ ಉಂಟಾದೀತು.
ಕಟಕ
ನೀವು ಕೈಗೊಳ್ಳುವ ನಿರ್ಧಾರ ನಿಮಗೆ ಒಳಿತು ತರಲಿದೆ. ಪ್ರತಿಕೂಲ ಪರಿಸ್ಥಿತಿ ಕೂಡಾ ನಿಮಗೆ ಅನುಕೂಲಕರವಾಗಿ ಮಾರ್ಪಡುವುದು. ಧೈರ್ಯದಿಂದಿರಿ.
ಸಿಂಹ
ಏಕಕಾಲದಲ್ಲಿ ನಿಮ್ಮ ಬದುಕಲ್ಲಿ ವಿವಿಧ ಬೆಳವಣಿಗೆ ಉಂಟಾದೀತು. ನೀವು ಸಹನೆಯಿಂದ, ಕ್ರೀಡಾಸ್ಫೂರ್ತಿಯಿಂದ ವ್ಯವಹರಿಸಬೇಕು.
ಕನ್ಯಾ
ಸಂತೋಷ ಮತ್ತು ತೃಪ್ತಿಕರ ದಿನ. ನೀವು ಬಯಸಿದಂತೆ ದಿನ ಸಾಗುವುದು. ಆಪ್ತರ ಜತೆ ಆತ್ಮೀಯ ಕಾಲಕ್ಷೇಪ. ದಂಪತಿಗಳಿಗೆ ಶುಭ ಸುದ್ದಿ .
ತುಲಾ
ಜತೆಗೇ ಖರ್ಚು ಕೂಡ ಅಧಿಕ. ಕೌಟುಂಬಿಕ ಸಮಸ್ಯೆ ಪರಿಹಾರ. ಅಧ್ಯಾತ್ಮದ ವಿಷಯ ಹೆಚ್ಚು ಆಸಕ್ತಿ ಮೂಡಿಸಬಹುದು. ಆದಾಯ ಹೆಚ್ಚು.
ವೃಶ್ಚಿಕ
ಸ್ನೇಹಿತರ ಸಂಗದಲ್ಲಿ ಸಂತೋಷ ಕಾಣುವಿರಿ. ನಿಮ್ಮ ನಡೆನುಡಿ ಕೆಲವರ ಮನ ನೋಯಿಸುವ ಸಾಧ್ಯತೆಯಿದೆ. ಅದಕ್ಕೆ ಆಸ್ಪದ ಕೊಡದಿರಿ. ಖರ್ಚು ಅಧಿಕ.
ಧನು
ಯಾವುದೇ ವಿಷಯದಲ್ಲಿ ಸ್ಪಷ್ಟತೆಯಿಲ್ಲದೆ ದುಡುಕಿನ ನಿರ್ಧಾರ ತಾಳದಿರಿ. ಮನಸ್ಸು ಗೊಂದಲದ ಗೂಡು. ಕೆಲ ವಿಚಾರಗಳು ಕೊರೆಯುತ್ತಿರುತ್ತದೆ.
ಮಕರ
ಇಂದಿನ ದಿನ ಸಂತೋಷದಿಂದ ಕಳೆಯುವ ಯೋಜನೆ ನಿಮ್ಮದಾಗಿದ್ದರೆ ಅದಕ್ಕೆ ಯಾವ ಅಡ್ಡಿ ಬರಲಾರದು. ನಿಮ್ಮ ಉದ್ದೇಶ ಈಡೇರಿಕೆ.
ಕುಂಭ
ಸಣ್ಣ ಹಿನ್ನಡೆಗೆ ಧೃತಿಗೆಡದಿರಿ. ಮತ್ತೆ ಪ್ರಯತ್ನ ಮಾಡಿ. ವಿಳಂಬವಾದರೂ ನಿಮ್ಮ ಗುರಿ ಈಡೇರಲಿದೆ. ಸಂಗಾತಿ ಜತೆಗೆ ವೈಮನಸ್ಸು ಸಂಭವ.
ಮೀನ
ಆರೋಗ್ಯಕರ ಆಹಾರ ಸೇವನೆ ಅವಶ್ಯ. ಹೊಟ್ಟೆ ಕೆಡದಂತೆ ನೋಡಿಕೊಳ್ಳಿ. ಭಾವನಾತ್ಮಕ ಏರುಪೇರು ಉಂಟಾದೀತು. ಸಣ್ಣ ವಿಷಯಕ್ಕೂ ಮನಸ್ಸು ಕೆಡಿಸಿಕೊಳ್ಳದಿರಿ.