ದಿನಭವಿಷ್ಯ: ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ

ಮೇಷ
ಭವಿಷ್ಯದಲ್ಲಿ ಹಿರಿದಾದುದನ್ನು ಸಾಽಸುವ  ನಿಮ್ಮ ಉದ್ದೇಶ ಈಡೇರುವ ಸಂಕೇತ ಲಭಿಸಲಿದೆ. ಆರೋಗ್ಯ ಸಮಸ್ಯೆ ಕಡೆಗಣಿಸದಿರಿ.
ವೃಷಭ
ಇಂದು ಉತ್ತಮ ಅವಕಾಶವೊಂದು ನಿಮ್ಮ ಕೈ ಜಾರಬಹುದು. ಆರ್ಥಿಕ ಪರಿಸ್ಥಿತಿ ಕಠಿಣವಾದೀತು.    ಕ-, ಕೆಮ್ಮಿನಂತಹ ಸಮಸ್ಯೆ ಕಾಡಬಹುದು.
ಮಿಥುನ
ಭಾವನಾತ್ಮಕ ಅಥವಾ ಕೌಟುಂಬಿಕ ವಿಚಾರದಲ್ಲಿ ನೀವು ತಾಳುವ ನಿರ್ಧಾರ ಉತ್ತಮ -ಲ ನೀಡಲಿದೆ. ಮೀನಮೇಷ ಎಣಿಸುವ ಅಗತ್ಯವಿಲ್ಲ.
ಕಟಕ
ವೃತ್ತಿಯಲ್ಲಿ ಪ್ರಗತಿ.  ಸಮಸ್ಯೆ ಪರಿಹಾರ. ಉದ್ವಿಗ್ನತೆ ಕಳೆದು ಸೌಹಾರ್ದ ಸ್ಥಿತಿ ಮೂಡಲಿದೆ. ಆರೋಗ್ಯ ಸಮಸ್ಯೆ ಕಾಡೀತು.
ಸಿಂಹ
ಹಣದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ.  ಪರಿಚಯವಿಲ್ಲದ ವ್ಯವಹಾರದಿಂದ ದೂರವಿರಿ. ಕೌಟುಂಬಿಕ ಬೇಡಿಕೆ ಹೆಚ್ಚಲಿದೆ.
ಕನ್ಯಾ
ಉದ್ಯೋಗ ಕ್ಷೇತ್ರದಲ್ಲಿ ಅಸಹಕಾರ. ನಿರೀಕ್ಷಿತ ಯಶ ದೊರಕದು. ಮಾನಸಿಕ ನೆಮ್ಮದಿ ಹಾಳು. ಧನವ್ಯಯ ಹೆಚ್ಚಳ. ಕೌಟುಂಬಿಕ ಕಿರಿಕಿರಿ.
ತುಲಾ
ಅಸಹಜ ಪರಿಸ್ಥಿತಿ ಎದುರಿಸುವ ಸಂಭವ. ಆದರೆ ಅದನ್ನು ಎದುರಿಸುವ ಸ್ಥೈರ್ಯ ನಿಮಗಿದೆ. ವ್ಯವಹಾರದಲ್ಲಿ ತೊಡಕು ನಿವಾರಣೆ.
ವೃಶ್ಚಿಕ
ಕಾರ್ಯದ ಒತ್ತಡದಿಂದ ಬಳಲುವಿರಿ. ಒತ್ತಡ ಹೆಚ್ಚುವುದೇ ಹೊರತು ಕಡಿಮೆಯಾಗದು. ಆರೋಗ್ಯದ ಚಿಂತೆ.
ಧನು
ನಿಮ್ಮ ಅದೃಷ್ಟ ಕೈಕೊಡುವುದು.  ಧನನಾಶ ಉಂಟಾದೀತು. ಕೆಲವರಿಗೆ ಬೆನ್ನು ನೋವು ಸಂಭವ.  ಕೌಟುಂಬಿಕ ಶಾಂತಿ ಕದಡಬಹುದು.
ಮಕರ
ಕೆಲವಾರು ಸವಾಲುಗಳ ದಿನ. ಕುಟುಂಬ ಸದಸ್ಯರ ಸಲಹೆ ಪಾಲಿಸಿರಿ. ಅವಿವಾಹಿತರಿಗೆ ಸಂಬಂಧ ಕೂಡಿಬಂದೀತು.
ಕುಂಭ
ಸಂಬಂಧದಲ್ಲಿ ಭಿನ್ನಮತ. ವಾಗ್ವಾದ ನಡೆದೀತು. ತಾಳ್ಮೆಯಿಂದ ವ್ಯವಹರಿಸಿ. ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು.
ಮೀನ
ಸಂತೋಷದ ದಿನ. ವೃತ್ತಿಯಲ್ಲಿ ಯಶಸ್ಸು. ಅನಿರೀಕ್ಷಿತ ಧನಲಾಭ. ಏಕಾಂಗಿಗಳಿಗೆ ಸಂಗಾತಿ ದೊರಕಬಹುದು. ಆರೋಗ್ಯ ಸ್ಥಿರ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!