ದಿನಭವಿಷ್ಯ: ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರ ಪ್ರಾರಂಭಿಸುವ ಸಾಧ್ಯತೆ, ಪ್ರೀತಿಪಾತ್ರರಿಂದ ಬೆಂಬಲ

ಮೇಷ
ಸಂತೋಷ, ಸಮಾಧಾನಕರ ದಿನ. ಕ್ಲೇಶಗಳು ಬಾಽಸವು. ಪ್ರತಿಕೂಲ ಬೆಳವಣಿಗೆ ಸಂಭವಿಸದು. ಬಂಧು ಮಿತ್ರರ ಭೇಟಿ.
ವೃಷಭ
ತೃಪ್ತಿಕರ ದಿನ. ಆತ್ಮೀಯ ಸಂಬಂಧ ಗಟ್ಟಿಗೊಳ್ಳುವುದು.   ಆರೋಗ್ಯ ಸ್ಥಿರ. ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಶಾಂತಿ.
ಮಿಥುನ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸಂಭವ. ಆರ್ಥಿಕ ಪರಿಸ್ಥಿತಿ ಕೂಡಾ ತೃಪ್ತಿಕರವಲ್ಲ. ಹೆಚ್ಚುವರಿ ಖರ್ಚು. ಆರೋಗ್ಯದ ಚಿಂತೆ ಕಾಡಬಹುದು.
ಕಟಕ
ಹಲವಾರು ಬದಲಾವಣೆಗೆ ಇಂದು ಸಾಕ್ಷಿಯಾಗುವಿರಿ. ವಾಗ್ವಾದ ನಡೆದೀತು.     ಸಂಬಂಧ ಕಾಯ್ದುಕೊಳ್ಳಿ. ಸಹನೆಯಿಂದ ವರ್ತಿಸಿ.
ಸಿಂಹ
‘ಯೋಚಿಸಿ ಕಾರ್ಯ ಎಸಗಿ’. ಇದು ನಿಮ್ಮ ಇಂದಿನ ಮಂತ್ರವಾಗಲಿ. ದುಡುಕು ಕೆಲಸ ಕೆಡಿಸೀತು. ಆಪ್ತರ ಜತೆ ನಿಷ್ಟುರ ತಪ್ಪಿಸಿ.
ಕನ್ಯಾ
ಕುಟುಂಬ ಸದಸ್ಯರ ಮೇಲೆ ಅಸಹನೆ ತೋರುವ ಪ್ರಸಂಗ ಒದಗೀತು. ಮಾತಿನ ಚಕಮಕಿಯೂ ನಡೆದೀತು. ಸಂಯಮ ಕಳಕೊಳ್ಳದಿರಿ.
ತುಲಾ
ಬಹಷ್ಟು ಕೆಲಸ ನಿಮ್ಮಿಂದ ನಡೆಯಬೇಕಿದೆ.  ಇತರರ ಜತೆ ಸಹನೆಯಿಂದ ವರ್ತಿಸಿ. ಹಣದ ವ್ಯವಹಾರದಲ್ಲಿ ತುಸು ಏರುಪೇರು ಸಂಭವ.
ವೃಶ್ಚಿಕ
ಕೆಲಸದಲ್ಲಿ ತಪ್ಪು ನಡೆದೀತು. ಹಾಗಾಗಿ ಎಚ್ಚರ ವಹಿಸಿ. ಖರ್ಚು ಹೆಚ್ಚು. ಧನಹಾನಿಯೂ ಸಂಭವಿಸಬಹುದು. ಕಣ್ಣಿನ ಅಲರ್ಜಿ ಉಂಟಾದೀತು.
ಧನು
ಅತಿಯಾದ ಕೆಲಸ. ಪ್ರಮಾದವೂ ಘಟಿಸಬಹುದು. ಸಂಬಂಧದಲ್ಲಿ ಏರುಪೇರು. ಸಂಘರ್ಷ ತಪ್ಪಿಸಿರಿ.
ಮಕರ
ಮನಸ್ಸು ವಿಚಲಿತಗೊಳಿಸುವ ವಿಷಯದತ್ತ ಗಮನ ಹರಿಸದಿರಿ. ಕೌಟುಂಬಿಕ ಬೇಡಿಕೆ ಈಡೇರಿಸಿ. ಆರ್ಥಿಕ ನಷ್ಟ ಸಂಭವ.
ಕುಂಭ
ನಿಮ್ಮ ವ್ಯವಹಾರ ಸುಗಮವಾಗಿ ಸಾಗುವ ಮೂಲಕ ಮಾನಸಿಕ ನಿರಾಳತೆ. ಚಿಂತೆ ಉಂಟು ಮಾಡಿದ್ದ ವಿಷಯ ಇತ್ಯರ್ಥ ಕಾಣುವುದು.
ಮೀನ
ಇತರರ ಜತೆ ಹೆಚ್ಚು ಹೊಂದಾಣಿಕೆ ಸಾಽಸಿ. ನಿಮ್ಮ ನಿಲುವಿಗೆ ಅಂಟಿಕೊಂಡು ಕೂರದಿರಿ. ವಾಗ್ವಾದ, ಸಂಘರ್ಷಕ್ಕೆ ಮುಂದಾಗದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!